ಮಂಗಳೂರು: ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ವತಿಯಿಂದ ಯಶಸ್ವಿ ಸ್ವದೇಶಿ ಐಟಿ ಉದ್ಯಮಗಳಲ್ಲಿ ಒಂದಾದ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರೊಂದಿಗೆ ದಿ ನೋವಿಗೋ ಸ್ಟೋರಿ ಎಂಬ ಶೀರ್ಷಿಕೆಯಲ್ಲಿ ಸಂವಾದ ಕಾರ್ಯಕ್ರಮ ಜು.18ರಂದು ಬೆಜೈ-ಕಾಪಿಕಾಡ್‌ನ ಅಜಂತಾ ಬಿಸಿನೆಸ್ ಸೆಂಟರ್‌ನಲ್ಲಿ ನಡೆಯಿತು.
ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರು ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಯಲ್ಲಿ ಮಂಗಳೂರಿನ ದಾರಿದೀಪವಾಗಿ ನೋವಿಗೊ ಸೊಲ್ಯೂಷನ್ಸ್ ಎಂಬ ವಿಷಯದ ಬಗ್ಗೆ ಸಂವಾದ ನಡೆಸಿಕೊಟ್ಟರು. ಉದ್ಯಮಶೀಲತೆ, ಸ್ಥಳೀಯ ಪ್ರತಿಭೆ ಮತ್ತು ದೂರದೃಷ್ಟಿಯ ಚಿಂತನೆಗೆ ಕಾರ್ಯಕ್ರಮದಲ್ಲಿ ವಿಶೇಷ ಒತ್ತು ನೀಡಲಾಗಿತ್ತು.
*ಟಿ ನೋವಿಗೋ ಸೊಲ್ಯೂಷನ್ಸ್
2011ರಲ್ಲಿ ಸ್ಥಾಪನೆಯಾದ ನೋವಿಗೊ ಸೊಲ್ಯೂಷನ್ಸ್ 900ಕ್ಕೂ ಹೆಚ್ಚು ಉದ್ಯೋಗಿಗಳು, ಭಾರತದಾದ್ಯಂತ ಐದು ಕಚೇರಿಗಳು ಮತ್ತು ಯುಎಸ್‌ಎ, ಯುಕೆ, ಯುಎಇ, ನೆದರ್‌ಲ್ಯಾಂಡ್ಸ್, ಸೌದಿ ಅರೇಬಿಯಾ ಮತ್ತು ಸಿಂಗಾಪುರದಲ್ಲಿ 130ಕ್ಕೂ ಹೆಚ್ಚು ಕ್ಲೈಂಟ್‌ಗಳನ್ನು ಹೊಂದಿರುವ ಜಾಗತಿಕ ತಂತ್ರಜ್ಞಾನ ಕಂಪೆನಿಯಾಗಿ ಯಶಸ್ವಿಯಾಗಿದೆ. ಸರಾಸರಿ ಶೇ.35 ವಾರ್ಷಿಕ ಬೆಳವಣಿಗೆಯ ದರವನ್ನು ಹೊಂದಿರುವ ನೋವಿಗೊ ಜಾಗತಿಕ ಮಟ್ಟದಲ್ಲಿ ಭದ್ರವಾಗಿ ನೆಲೆವೂರುವತ್ತ ದೃಢ ಹೆಜ್ಜೆಯನ್ನಿಟ್ಟಿದೆ.
ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರವೀಣ್ ಕುಮಾರ್ ಕಲ್ಭಾವಿ, ಆರಂಭಿಕ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಮೂರು ಕ್ರಿಯಾತ್ಮಕ ಸಹ-ಸಂಸ್ಥಾಪಕರೊಂದಿಗೆ ಉದ್ಯಮಿಯಾಗಿ ಟೆಕ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದು ಮತ್ತು ಆರಂಭದಲ್ಲಿ ಬಾಹ್ಯ ನಿಧಿ ಇಲ್ಲದೆ, ಉದ್ಯಮ ಆರಂಭಿಸಿರುವುದನ್ನು ಮೆಲುಕು ಹಾಕಿದರು. ದುಬೈಗೆ ಹೋಲಿಸಿದರೆ ಅಮೆರಿಕ ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯಾಗಿದೆ. ಆದರೂ, ನಮ್ಮ ಪ್ರಯಾಣದ ಉದ್ದಕ್ಕೂ, ನಾವು ಬೇರೂರಿದ್ದೇವೆ ನಮ್ಮ ಉದ್ಯೋಗಿಗಳಲ್ಲಿ 50ಶೇ. ಮಂಗಳೂರಿನವರು ಇದ್ದಾರೆ ಎಂದರು.
ಸಹ-ಸಂಸ್ಥಾಪಕ ಮತ್ತು ಸಿಟಿಒ ಮೊಹಮ್ಮದ್ ಹನೀಫ್, ಸಹ-ಸಂಸ್ಥಾಪಕ ಮತ್ತು ಸಿಸಿಒ ಶಿಹಾಬ್ ಕಲಂದರ್ ಮತ್ತಿತತರು ಮಾತನಾಡಿದರು.
ಹಾಂಗ್ಯೋ ಐಸ್ ಕ್ರೀಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ, ನೋವಿಗೋ ಸಂಸ್ಥಾಪಕರನ್ನು ಸನ್ಮಾನಿಸಿದರು. ಮುಂಚೂಣಿಯ ಉದಯೋನ್ಮುಖ ನವೋದ್ಯಮ- ಮಂಗಳೂರು: ಇಂಡಿಯಂಟಾ ಇ-ಮೊಬಿಲಿಟಿ ಪ್ರೈ. ಲಿ ಸ್ಥಾಪಕ ಮತ್ತು ಸಿಇಒ ಡಾ. ಆರನ್ ಡಿಸೋಜ ಅವರ ಪರವಾಗಿ ತಂಡದ ಸದಸ್ಯರಾದ ವಸಂತಿ ಮತ್ತು ಶ್ರಾವ್ಯ ಪ್ರತಿನಿಧಿಸಿದರು. ಸ್ಪಾಟ್‌ಲೈಟ್ ಆನ್ ಹೋಮ್‌ಗ್ರೋನ್ ನವೋದ್ಯಮದಲ್ಲಿ ಅಪ್‌ಡಾಪ್ಟ್ ಸಿಎಸ್‌ಆರ್ ಪ್ರೈ.ಲಿ. ಸಹ-ಸಂಸ್ಥಾಪಕ ಮತ್ತು ಸಿಇಒ ಮಿಥುನ್ ಸುವರ್ಣ ಗೌರವ ಸ್ವೀಕರಿಸಿದರು. ಮಂಗಳೂರು ಅನಾಲಿಟಿಕ್ಸ್ ಮತ್ತು ರಿಸರ್ಚ್ ಕನ್ಸಲ್ಟಿಂಗ್‌ನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕಿ ರೂಪಾ ಭಟ್ ಜಾಕೋಬ್ ಅವರ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಮಹೇಶ್ ಶೆಟ್ಟಿ ವಂದಿಸಿದರು. ವ್ಯವಸ್ಥಾಪಕ ಪಾಲುದಾರರೂ ಆಗಿರುವ ಮಂಗಲ್‌ದೀಪ್ ಎ. ಆರ್. ಉಪಸ್ಥಿತರಿದ್ದರು. ಆರ್‌ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.