ಮೈಸೂರು ವಿವಿ ಅಂತರವಲಯ ಮಟ್ಟದ ಕ್ರೀಡಾಕೂಟ: ಮಂಡ್ಯ ಮಹಿಳಾ ಕಾಲೇಜು ಉತ್ತಮ ಸಾಧನೆ

1
Published on

ಮಂಡ್ಯ: ಹುಣಸೂರಿನ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜು.15ರಿಂದ 17ರವರೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯ ಮಹಿಳೆಯರ ಅಂತರವಲಯ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಟೇಬಲ್ ಟೆನ್ನಿಸ್‌ನಲ್ಲಿ ನೊರೇಶ, ಸೈದಾ ಸಮರ್, ಆರ್.ಭವಾನಿ, ಬಿ.ಕೆ.ಹರ್ಷಿಣಿ, ಎಸ್.ಪಿ.ಲಾವಣ್ಯ ದ್ವಿತೀಯ ಸ್ಥಾನ, ಚೆಸ್‌ನಲ್ಲಿ ಎಚ್.ತನುಶ್ರೀ, ವೈ.ವಿ.ವಿನುತಾ, ಎಸ್.ಎಸ್.ನಕ್ಷ, ಸಮ್ರಿನ್, ಆರ್.ಭವಾನಿ, ನೈತನ್ಯ ದ್ವಿತೀಯ ಸ್ಥಾನ ಹಾಗೂ ಟೆನ್ನಿಸ್‌ನಲ್ಲಿ ಎಸ್.ಪಿ.ಲಾವಣ್ಯ, ಎಸ್.ಎಸ್.ಕೀರ್ತನಾ, ನೋರೇಶ, ಬಿ.ಕೆ.ಹರ್ಷಿಣಿ, ಆರ್.ಭವಾನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಆರ್.ದಶರಥ, ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಆರ್.ಲೋಕೇಶ್, ಡಾ.ಬರಗೂರಪ್ಪ, ಎಸ್.ನವೀನ್, ವ್ಯವಸ್ಥಾಪಕ ಕೆ.ಪಿ.ರವಿಕಿರಣ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net