ಜೀವನದ ಅವಿಭಾಜ್ಯ ಅಂಗ ಶುಚಿತ್ವ

30 sgn 1
Published on

ಶಿಗ್ಗಾಂವಿ: ಶುಚಿತ್ವವವು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸಿದಾಗ ಮಾತ್ರ ಮಹಾತ್ಮ ಗಾಂಧೀಜಿಯವರು ಕಂಡ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಫೈರೋಜಾ ಎಚ್. ಉಕ್ಕಲಿ ಹೇಳಿದರು.

ಪಟ್ಟಣದ ಹೊರವಲಯದ ನಾಗನೂರು ಕೆರೆ ದಡದಲ್ಲಿ ಶನಿವಾರ ಪುರಸಭೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ನಡೆದ ಸ್ವಚ್ಛತಾ ಹಿ ಸೇವಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ಮಹತ್ವಕಾಂಕ್ಷಿಗಳ ಯೋಜನೆಗಳು ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಶ್ರಮವಹಿಸಿ ನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸ್ವಚ್ಛ ಭಾರತಕ್ಕಾಗಿ ಹಲವಾರು ಯೋಜನೆಗಳು ಜಾರಿಯಾಗಿದ್ದು, ಅಂತಹ ಯೋಜನೆಗಳ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರು ಪುರಸಭೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರೊಂದಿಗೆ ಕೆರೆಯ ಸುತ್ತಲು ಸ್ವಚ್ಛತಾ ಕಾರ್ಯ ನಡೆಸಲಾಯಿತು. ದಿವಾಣಿ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂಯ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಜಿ. ಮಾತನಾಡಿದರು.

ಪುರಸಭೆ ಅಧಿಕಾರಿಗಳಾದ ವಿ.ಎಸ್. ಪಾಟೀಲ, ಆಂಜನೆಪ್ಪ, ಸತೀಶ, ಶೈಲಜಾ ಪಾಟೀಲ, ಗಿರಿಜಮ್ಮ ಕಮಡೊಳ್ಳಿ, ನ್ಯಾಯವಾದಿಗಳಾದ ಎಫ್.ಎಸ್. ಕೊಣನನವರ, ಎಫ್.ಬಿ. ಗಂಜೀಗಟ್ಟಿ , ಎಸ್.ಎಂ. ಗಾಣಿಗೇರ, ಬಿ.ಜಿ. ರಾಗಿ, ವಸಂತಾ ಬಾಗೂರ, ಧೀರಜ ಕೊಣನವರ, ಚಂದ್ರು ಹರಕುಣಿ, ಪಿ.ಆರ್. ಕಲ್ಯಾಣಿ, ಸತೀಶ ತಳವಾರ, ರಾಜೇಶ ಕೆ., ಗಂಗಾಧರ ನಂದರಗಿ, ಅಕ್ಕಮ್ಮಾ ಮಾಕಾಪುರ, ಛಾಯಾ ಕಾಳೆ, ಪ್ರಸನ್ನ ಹಿರೇಮಠ, ಗುಡ್ಡಪ್ಪ ಬಂಕಾಪುರ, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net