ಲಾಕ್​ಡೌನ್ ಅವಧಿಯಲ್ಲಿ ಗರ್ಭನಿರೋಧಕ ಔಷಧ ಖರೀದಿ ಪ್ರಮಾಣ ಹೆಚ್ಚಳ

Lockdown 24 March 20
Published on

ಬೆಂಗಳೂರು: ಲಾಕ್​ಡೌನ್ ಅವಧಿಯಲ್ಲಿ ಗರ್ಭನಿರೋಧಕ ಔಷಧ ಮತ್ತು ಗರ್ಭಧಾರಣೆ ಪರೀಕ್ಷೆಯ ಉಪಕರಣಗಳ ಖರೀದಿ ಪ್ರಮಾಣ ಮೊದಲಿಗಿಂತ ಶೇ.50 ಹೆಚ್ಚಳವಾಗಿದೆ.

ಲಾಕ್​ಡೌನ್ ಘೊಷಣೆ ಆದಾಗಿನಿಂದ ನಗರದ ಅನೇಕರು ಮನೆಯಿಂದಲೇ ಕೆಲಸ ಮಾಡು ತ್ತಿದ್ದಾರೆ. ಗರ್ಭಧಾರಣೆ ಸಾಧ್ಯತೆಗಳು ಇರುವುದನ್ನು ಮನಗಂಡು, ಗರ್ಭಧಾರಣೆ ತಪಾಸಣೆ ಕಿಟ್ (ಟೆಸ್ಟಿಂಗ್ ಕಿಟ್) ಹಾಗೂ ಗರ್ಭ ನಿರೋಧಕ ಮಾತ್ರೆಗಳನ್ನು ಖರೀದಿಸುತ್ತಿದ್ದಾರೆ. ಬೇಡಿಕೆ ಹೆಚ್ಚಿದರೂ ಮಾರುಕಟ್ಟೆಯಲ್ಲಿ ಔಷಧ ಕೊರತೆ ಎದುರಾಗಿಲ್ಲ.

ರಾಜಧಾನಿಯಲ್ಲಿ ಪ್ರತಿ ತಿಂಗಳು 14-15 ಬಾಕ್ಸ್ ಗರ್ಭನಿರೋಧಕ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಲಾಕ್​ಡೌನ್ ಬಳಿಕ ಈ ಸಂಖ್ಯೆ 25ಕ್ಕೆ ಏರಿಕೆಯಾಗಿದೆೆ. ಮೊದಲಿಗಿಂತ ಮೂರು ಪಟ್ಟು ಹೆಚ್ಚು ಗರ್ಭಧಾರಣೆ ಪರೀಕ್ಷಾ ಕಿಟ್​ಗಳನ್ನು ಸೇಲ್ ಮಾಡಲಾಗುತ್ತಿದೆ ಎಂದು ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಲಾಕ್​ಡೌನ್​ನಿಂದ ದೇಶ ದಲ್ಲಿ ಸಂಕಷ್ಟ ಎದುರಾಗಿ ಭವಿಷ್ಯದ ಚಿಂತೆ ಕಾಡುತ್ತಿದೆ. ಈ ನಡುವೆ ಮಗುವಾದರೆ ಏನು ಮಾಡುವುದು ಎಂಬ ಚಿಂತೆ ದಂಪತಿಗೆ ಕಾಡುತ್ತಿದೆ. ಈ ಕಾರಣದಿಂದಾಗಿ, ಹೆಚ್ಚೆಚ್ಚು ಜನರು ಪ್ರಸೂತಿತಜ್ಞರನ್ನು ಸಂರ್ಪಸುತ್ತಿದ್ದಾರೆ. ಈಗಾಗಲೇ ಗರ್ಭ ಧಾರಣೆ ಮಾಡಿರುವ ಕೆಲವರು ಗರ್ಭಪಾತಕ್ಕೂ ಸಂರ್ಪಸುತ್ತಿದ್ದಾರೆ ಎಂದು ಪ್ರಸೂತಿ ತಜ್ಞೆ ಡಾ. ಹೇಮಾ ದಿವಾಕರ್ ತಿಳಿಸಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲವರು ಡನ್​ಜೋ ಮೂಲಕವೂ ಗರ್ಭನಿರೋಧಕ ಔಷಧಗಳನ್ನು ಆರ್ಡರ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net