ವೃದ್ಧ ಮಾವನಿಗೆ ಹಿಗ್ಗಾಮುಗ್ಗಾ ಥಳಿಸಿದ ಸೊಸೆ; ಕೈಮುಗಿದು ಪರಿಪರಿಯಾಗಿ ಬೇಡಿದ್ರು ಬಿಡಲಿಲ್ಲ ಕೆಇಬಿ ಅಧಿಕಾರಿ

An incident of daughter-in-law beating an elderly father-in-law took place in Mangalore
Published on

ಮಂಗಳೂರು: ಸರ್ಕಾರಿ ಅಧಿಕಾರಿಯೊಬ್ಬರು ವೃದ್ಧ ಮಾವನಿಗೆ  ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.

87 ವರ್ಷದ ಪದ್ಮನಾಭ ಸುವರ್ಣ ಅವರು ಸೊಸೆಯಿಂದ ಹಲ್ಲೆಗೊಳಗಾದ ಮಾವ. ಆರೋಪಿ ಸೊಸೆಯನ್ನು ಉಮಾಶಂಕರಿ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ.

ನಡೆದಿದ್ದೇನು?:  ಮಾರ್ಚ್ 9 ರಂದು ಮಾವನಿಗೆ ವಾಕ್ ಸ್ಟಿಕ್ ನಲ್ಲಿ ಸೊಸೆ ಮನಬಂದಂತೆ ಥಳಿಸಿದ್ದಾಳೆ. ಮಾವ ಕೈಮುಗಿದು ಬೇಡಿಕೊಂಡರೂ ಬಿಡದೇ ಥಳಿಸಿದ್ದಾಳೆ. ಈ ಪರಿಣಾಮ ವೃದ್ಧನ ಕೈ, ಮುಖಕ್ಕೆ ಗಾಯಗಳಾಗಿವೆ. ಉಮಾಶಂಕರಿ ಪತಿ ವಿದೇಶದಲ್ಲಿ ಉದ್ಯೋಗಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಯಾವ ಕಾರಣಕ್ಕೆ ಸೊಸೆ ಮಾವನಿಗೆ ಹೊಡೆದಿದ್ದಾಳೆ ಅನ್ನೋ ವಿಚಾರ ತಿಳಿದುಬಂದಿಲ್ಲ. ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ತಂದೆಗೆ ಥಳಿಸಿದ ಉಮಾ ಶಂಕರಿ ವಿರುದ್ಧ ಸಿಸಿಟಿವಿ ದೃಶ್ಯ ಆಧರಿಸಿ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net