ಶಿಕ್ಷಣದೊಂದಿಗೆ ಹಿರಿಯರ ಆದರ್ಶ ಪಾಲಿಸಿ

ಕಸಾಪ
ಕೊರಟಗೆರೆ ತಾಲೂಕು ಕಸಾಪ ಏರ್ಪಡಿಸಿದ್ದ ಪ್ರತಿಭಾ ಪುಸ್ಕಾರ ಹಾಗೂ ಕಸಾಪ ಆಜೀವ ಸದಸ್ಯರ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಜಿಲ್ಲಾ ಕಸಾಪ ಅಧ್ಯ ಸಿದ್ದಿಲಿಂಗಪ್ಪ, ಈರಣ್ಣ ಮತ್ತಿತರರು ಸನ್ಮಾನಿಸಿದರು.
Published on

ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಸಲಹೆ

ಕೊರಟಗೆರೆ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉದ್ಯೋಗ ಪಡೆಯಲಷ್ಟೇ ಮುಖ್ಯವಾಗಿದ್ದು, ಜೀವನದ ಸಾಧನೆಗೆ ಸಾಧಕರ ಆದರ್ಶವನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯ ಕೆ.ಎಸ್​.ಸಿದ್ದಲಿಂಗಪ್ಪ ತಿಳಿಸಿದರು.


ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಏರ್ಪಡಿಸಿದ್ದ ಸಾಹಿತ್ಯ ಪರಿಷತ್​ನ ಆಜೀವ ಸದಸ್ಯರ ಸಭೆ,
ಕಸಾಪ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಹಿರಿಯ ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕಿದೆ. ಇದಕ್ಕೆ ಪೂರಕವಾಗಿ 18 ವರ್ಷ ತುಂಬಿದ ಯುವಕರು ಕನ್ನಡ ಸಾಹಿತ್ಯ ಪರಿಷತ್​ನ ಸದಸ್ಯರಾಗುವ ಮೂಲಕ ಕನ್ನಡ ಭಾಷೆ ವಿಸ್ತರಿಸಬೇಕಿದೆ ಎಂದರು.


ಮರಣ ಹೊಂದಿರುವ ಸದಸ್ಯರ ಹೆಸರುಗಳು ತಾಲೂಕು ಕಸಾಪ ಮತದಾರರ ಪಟ್ಟಿಯಲ್ಲಿ ಮುಂದುವರಿಯುತ್ತಿದೆ. ಇದರೊಂದಿಗೆ ಹಲವು ಮತದಾರರ ವಿಳಾಸಗಳು ಬದಲಾವಣೆಯಾಗಿವೆ. ಅವುಗಳನ್ನು ಪರಿಷ್ಕರಿಸಲು ತಾಲೂಕು ಮಟ್ಟದ ಅಜೀವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಖಚಿತ ಮಾಹಿತಿ ಮೇರೆಗೆ ಪರಿಷ್ಕರಣೆ ಹಾಗೂ ತಾಲೂಕಿನಲ್ಲಿ ನೂತನ ಸದಸ್ಯರ ನೋಂದಾಣಿಯಾಗುತ್ತಿದೆ ಎಂದು ಹೇಳಿದರು.


ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಯೋಗಿಶಪ್ಪ ಮಾತನಾಡಿ, ಕೆಂಪೇಗೌಡ ವಂಶಸ್ಥರ ಆಳ್ವಿಕೆಯ ಐತಿಹಾಸಿಕ ಹಿನ್ನೆಲೆಯುಳ್ಳ ಕೊರಟಗೆರೆ ಶೈವ, ವೀರಶೈವ ಹಾಗೂ ಜೈನ ಧರ್ಮಗಳ ಬೀಡಾಗಿದೆ. ಔಷಧೀಯ ಸಸ್ಯ ೇತ್ರವಾಗಿ ರಾಜ್ಯದಲ್ಲಿಯೇ ಹೆಸರು ಪಡೆದಿದೆ. ಸಾಹಿತ್ಯ ೇತ್ರದಲ್ಲಿ ವೆಂಕಟಪ್ಪ, ಚಂದ್ರಸಾಗರ, ಪಿ.ವಿ.ನಾರಾಯಣ್​ ಅವರಂತಹ ದೊಡ್ಡ ಸಾಹಿತಿಗಳು ಪ್ರಧಾನವಾಗಿದ್ದರು. ಆದರೆ ಇತ್ತೀಚೆಗೆ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದ್ದು, ಮುಂದಿನ ದಿನಗಳಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚು ಪೋತ್ಸಾಹ ನೀಡಿದಂತಾಗುತ್ತದೆ ಎಂದರು.


ತಾಲೂಕು ಕಸಾಪ ಅಧ್ಯ ಕೆ.ಎಸ್​.ಈರಣ್ಣ ಮಾತನಾಡಿ, ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕು ಕನ್ನಡ ಪರಿಷತ್​ನ ಪ್ರಸಕ್ತ ವರ್ಷದಲ್ಲಿ 400ಕ್ಕೂ ಹೆಚ್ಚು ನೂತನ ಸದಸ್ಯರು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಟುವಟಿಕೆಗಳೊಂದಿಗೆ ಕನ್ನಡ ಭವನ ನಿರ್ಮಾಣ ಕಾರ್ಯ ಹಾಗೂ ನವೆಂಬರ್​ನಲ್ಲಿ ತಾಲೂಕು ಕನ್ನಡ ಸಮ್ಮೇಳನ ಮಾಡುವ ಗುರಿ ಹೊಂದಿಲಾಗಿದೆ ಎಂದು ತಿಳಿಸಿದರು.


ಜನಪದ ಕಲಾವಿದ ಹಾಗೂ ಸಾಹಿತಿ ಕಂಠಲಗೆರೆ ಹೊನ್ನಯ್ಯ, ಜಿಲ್ಲಾ ಕಸಾಪ ಸಂಚಾಲಕ ಜಿ.ಎಚ್​.ಮಹದೇವ ಪ್ರಸಾದ್​, ತಾಲೂಕು ಕಸಾಪ ಅಧ್ಯ ಕೆ.ಎಸ್​.ಈರಣ್ಣ, ನಿಕಟ ಪೂರ್ವ ಅಧ್ಯ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯೆ ದಾಾಯಿಣಿ ರಾಜಣ್ಣ, ಕಸಾಪ ಗೌರವ ಕಾರ್ಯದರ್ಶಿ ಹನುಮಂತರೆಡ್ಡಿ, ಕಾರ್ಯದರ್ಶಿ ಶಿವಾನಂದ್​, ಲ್ಮಪುತ್ರ, ಚಿಕ್ಕಪ್ಪಯ್ಯ, ಮಂಜುಳಾ ರಾಜಕುಮಾರ್​ ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚಿಗೆ ನಿಧನರಾದ ಕಮಲಾ ಹಂಪನಾ ಮತ್ತು ಅಪರ್ಣಾ ಅವರಿಗೆ ಸಭೆಗೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೈದ್ಯ ವಕೀಲ, ನೌಕರ, ಪೊಲೀಸ್​, ವಿದ್ಯಾರ್ಥಿಗಳ, ವ್ಯಾಪಾರಿಗಳು, ಜನಪ್ರತಿನಿಧಿಗಳು, ಕನ್ನಡಪರ ಸಂಟನೆಗಳು, ಕನ್ನಡಾಭಿಮಾನಿಗಳು ಹಾಗೂ ಸಾಹಿತಿಗಳ ಪ್ರತ್ಯೇಕ ಸಭೆ ನಡೆಸಿ ಎಲ್ಲರ ಸಹಕಾರ ಪಡೆದು ಪರಿಷತ್​ನ ಕಾರ್ಯಚಟುವಟಿಕೆಗಳ ಸಭೆ ನಡೆಸಿ ಜನಪರ ಪರಿಷತ್​ ಆಗಿ ತಾಲೂಕಿನಲ್ಲಿ ಕನ್ನಡ ಸಮ್ಮೇಳನ ನಡೆಸಲಾಗುವುದು.
ಸಿದ್ದಲಿಂಗಪ್ಪ ಜಿಲ್ಲಾ ಕಸಾಪ ಅಧ್ಯಕ್ಷ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net