

ಮಂಗಳೂರು: ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ಎ. ಸದಾನಂದ ಶೆಟ್ಟಿಯವರನ್ನು ಶ್ರೀದೇವಿ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಕೆಂಜಾರ್ ಕ್ಯಾಂಪಸ್‌ನ ಸಭಾಂಗಣದಲ್ಲಿ ಸನ್ಮಾನಿಸಿದರು.
ಪ್ರೊ.ಸ್ಯಾಮ್ಯುವೆಲ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಡಾ. ಜಗದೀಶ್.ಬಿ.ಕಾಮತ್ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಉಪಾಧ್ಯಕ್ಷ ನಿಧೀಶ್ ಎಸ್.ಶೆಟ್ಟಿ, ಟ್ರಸ್ಟಿ ಪ್ರಿಯಾಂಕಾ ಎನ್. ಶೆಟ್ಟಿ ಮತ್ತು ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು ಎ.ಸದಾನಂದ ಶೆಟ್ಟಿಯವರನ್ನು ಸನ್ಮಾನಿಸಿದರು.
ಪ್ರಾಂಶುಪಾಲ ಡಾ.ಕೆ.ಇ.ಪ್ರಕಾಶ್ ಸ್ವಾಗತಿಸಿ, ಪ್ರೊ.ಲೋಗನಾಥನ್ ಚಿನ್ನಸ್ವಾಮಿ ವಂದಿಸಿದರು. ಪ್ರೊ.ಶೆರಿಲ್ ಐಯೋನಾ ಕಾರ್ಯಕ್ರಮ ನಿರೂಪಿಸಿದರು.