ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಯತ್ನ, ಟಿಎಪಿಸಿಎಂಎಸ್ ನಿರ್ದೇಶಕ ಗುರುಪ್ರಕಾಶ್ ಅಭಿಮತ ನೂತನ ನಿರ್ದೇಶಕರಿಗೆ ಸನ್ಮಾನ

photo tgl 1(17.11.2020) tapcms director sanmana
Published on

ತ್ಯಾಮಗೊಂಡ್ಲು: ಟಿಎಪಿಸಿಎಂಎಸ್‌ನಿಂದ ಸರಬರಾಜಾಗುವ ಗೊಬ್ಬರ, ದಿನಸಿ ಮುಂತಾದ ಸಾಮಗ್ರಿಗಳನ್ನು ತಡೆರಹಿತವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೆಲಮಂಗಲ ಟಿಎಪಿಸಿಎಂಎಸ್ ನಿರ್ದೇಶಕ ಕೆ.ಆರ್.ಗುರುಪ್ರಕಾಶ್ ತಿಳಿಸಿದರು.

ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಕಾರೇಹಳ್ಳಿ ಗುರುಪ್ರಕಾಶ್, ಮರಳಕುಂಟೆ ನಾಗಭೂಷಣ್ ಹಾಗೂ ಹೊನ್ನರಾಯನಹಳ್ಳಿ ಮೋಹನ್‌ಕುಮಾರ್ ಅವರಿಗೆ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶುಕ್ರವಾರ ನಡೆದಿದ್ದ ಚುನಾವಣೆಯಲ್ಲಿ ಎ ಕೆಟಗರಿಯಲ್ಲಿ ಗುರುಪ್ರಕಾಶ್ ಮತ್ತು ನಾಗಭೂಷಣ್, ಮೋಹನ್ ಕುಮಾರ್ ಆಯ್ಕೆಯಾಗಿದ್ದರು.

ಮರಳಕುಂಟೆ ನಾಗಭೂಷಣ್ ಮಾತನಾಡಿ, ಟಿಎಪಿಸಿಎಂಎಸ್ ವ್ಯಾಪ್ತಿಯಲ್ಲಿ ಬರುವ 19 ಸೊಸೈಟಿಗಳನ್ನು ಜಿಲ್ಲೆಯಲ್ಲೇ ಮೊದಲನೇ ಸ್ಥಾನಕ್ಕೆ ತರಲು ಶ್ರಮ ವಹಿಸುತ್ತೇವೆ. ಸರಿಯಾದ ಸಮತಯಕ್ಕೆ ಪಡಿತರ ವಿತರಿಸಲು, ರೈತರಿಗೆ ಸಾಲ ಸೌಲಭ್ಯವನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಎಪಿಎಂಸಿ ನಿರ್ದೇಶಕ ಗೋವೇನಹಳ್ಳಿ ನಾರಾಯಣಸ್ವಾಮಿ, ಜೆಡಿಎಸ್ ಯುವ ಘಟಕದ ಹೋಬಳಿ ಅಧ್ಯಕ್ಷ ಸಿ.ಅಶ್ವತ್ಥ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್.ಹನುಮಂತರಾಜು, ಮಾಜಿ ಸದಸ್ಯರಾದ ಪಿ.ಎನ್.ಸುಜಿತ್ ಕುಮಾರ್, ಟಿ.ಗೋಪಿನಾಥ್, ಟಿ.ರಾಮಚಂದ್ರ, ತ್ಯಾಮಗೊಂಡ್ಲು ವಿಎಸ್‌ಎಸ್‌ಎನ್ ನಿರ್ದೇಶಕ ಡಿ.ಪುಟ್ಟಸ್ವಾಮಿ, ಕಳಲುಘಟ್ಟ ವಿಎಸ್ ಎಸ್ ಎನ್ ನಿರ್ದೇಶಕ ಕೃಪಾರುದ್ರೇಶ್, ಮುಖಂಡ ಎಂ.ಮಹಿಮಣ್ಣ, ಓಬಳಾಪುರ ಕಾರಾಳಪ್ಪ, ತ್ಯಾಮಗೊಂಡ್ಲು ಡೇರಿ ನಿರ್ದೇಶಕ ಟಿ.ಜಯರಾಂ, ಟಿ.ಆರ್.ರಾಮು, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net