

ಕುಂದಗೋಳ: ಸಾವಿರಾರು ರೂ. ಮೌಲ್ಯದ ಬೆಳ್ಳಿ ಸಾಮಗ್ರಿಗಳಿದ್ದ ಚೀಲವನ್ನು ಬಸ್‌ನಲ್ಲಿ ಬಿಟ್ಟು ಇಳಿದಿದ್ದ ಪ್ರಯಾಣಿಕನಿಗೆ ಬ್ಯಾಗ್ ಅನ್ನು ವಾಪಸ್ ನೀಡುವ ಮೂಲಕ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕುಂದಗೋಳದಿಂದ ಲಕ್ಷ್ಮೇಶ್ವರಕ್ಕೆ ಸಾರಿಗೆ ಬಸ್‌ನಲ್ಲಿ ಹೊರಟಿದ್ದ ಯರೇಬೂದಿಹಾಳ ಗ್ರಾಮದ ವಿರೂಪಾಕ್ಷಪ್ಪ ಕೋಷ್ಠಿ ಎಂಬಾತ ಬೆಳ್ಳಿ ಸಾಮಗ್ರಿ ಇರುವ ಚೀಲವನ್ನು ಬಿಟ್ಟು ಹೋಗಿದ್ದರು.
ಚಾಲಕ ಗೋಣೆಪ್ಪ ಮಲ್ಲಣ್ಣನ್ನವರ ಹಾಗೂ ನಿರ್ವಾಹಕ ಮಂಜುನಾಥ ದಿದ್ದಿಗಿ ಅವರು ಕುಂದಗೋಳ ಸಾರಿಗೆ ನಿಯಂತ್ರಕ ಪ್ರಕಾಶ ಹುಗ್ಗನ್ನವರ ನೇತೃತ್ವದಲ್ಲಿ ಮಂಗಳವಾರ ಚೀಲವನ್ನು ಸಂಬಂಧಪಟ್ಟ ಪ್ರಯಾಣಿಕನಿಗೆ ಹಸ್ತಂತರಿಸಿದರು. ಕಂಡಕ್ಟರ್ ಹಾಗೂ ಡ್ರೈವರ್‌ನ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.