ಕಣ್ಮನ ಸೆಳೆಯುವ ರಾಮಮಂದಿರದ ಮಾದರಿ

21sri-3
ಶೃಂಗೇರಿಯಲ್ಲಿರುವ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಮಾದರಿ.
Published on

ಶೃಂಗೇರಿ: ಅಯೋಧ್ಯೆಯಲ್ಲಿ ಸೋಮವಾರ ಪ್ರಾಣ ಪ್ರತಿಷ್ಠಾಪನಾಗೊಳ್ಳುತ್ತಿರುವ ಶ್ರೀರಾಮಮಂದಿರದ ಮಾದರಿಯನ್ನು ತುಮಕೂರಿನ ಶಿಲ್ಪಿ ವಿನಯ್‌ರಾಮ್ ಅವರು ತಯಾರಿಸಿದ್ದು ಶೃಂಗೇರಿ ಶ್ರೀಶಾರದಾಪೀಠದ ಶ್ರೀಚಂದ್ರಶೇಖರ್‌ಭಾರತೀ ಸ್ವಾಮೀಜಿ ಸಭಾಂಗಣದಲ್ಲಿ ಇಡಲಾಗಿದೆ. ರಾಜ್ಯದ ಎಲ್ಲೆಡೆ 55 ಕಡೆ ಮಾದರಿ ಪ್ರದರ್ಶಿಸಿದ್ದು, ಪ್ರಸ್ತುತ ಶೃಂಗೇರಿ ಶಾರದಾ ಪೀಠದಲ್ಲಿ ಜ.25 ರವರೆಗೆ ನೋಡಲು ಅವಕಾಶವಿದೆ. ಅತ್ಯಂತ ಸುಂದರವಾಗಿ ಕೆತ್ತಲಾದ ಶ್ರೀರಾಮ ಮಂದಿರದ ಮನಮೋಹಕ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದೆ.
ಹಿರಿಯಶ್ರೀಗಳ ಆಪ್ತಸಹಾಯಕ ಶ್ರೀಕೃಷ್ಣಮೂರ್ತಿ, ಅಧಿಕಾರಿ ಶ್ರೀದಕ್ಷಿಣಾಮೂರ್ತಿ ಹಾಗೂ ಹಿರಿಯ ಪುರೋಹಿತರಾದ ಶ್ರೀವಿದ್ವಾನ್ ಕೃಷ್ಣಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net