ಜಾಗೃತಿ ಮೂಡಿಸಿದರೂ ದೂರಾಗದ ದುಶ್ಚಟ

An evil that is not complained about even if awareness is raised
ರಬಕವಿ ಬನಹಟ್ಟಿ ಸರ್ಕಾರಿ ಪಪೂ ಮಹಾವಿದ್ಯಾಲಯದ ಸಭಾಭವನದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಡಾ. ಪಾರ್ವತಿ ಹಿರೇಮಠ ಚಾಲನೆ ನೀಡಿದರು. ಡಾ. ಮಹಾದೇವ ಪೋತರಾಜ, ಮಹಾಂತೇಶ ರಡ್ಡೆರಟ್ಟಿ ಇದ್ದರು.
Published on

ರಬಕವಿ-ಬನಹಟ್ಟಿ: ಧೂಮಪಾನ ಕೆಟ್ಟದ್ದು, ಧೂಮಪಾನಿಗಳು ಕೆಟ್ಟವರಲ್ಲ. ಸರ್ಕಾರ ಮನುಷ್ಯನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ನಿರಂತರ ಜಾಗೃತಿ ಮೂಡಿಸುತ್ತಿದೆ. ಆದರೆ, ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. ಇದು ನಮಗೆ ಬೇಸರ ತಂದಿದೆ ಎಂದು ಅವಳಿ ನಗರದ ವೈದ್ಯೆ ಡಾ. ಪಾರ್ವತಿ ಹಿರೇಮಠ ಹೇಳಿದರು.

ರಬಕವಿ-ಬನಹಟ್ಟಿ ಸರ್ಕಾರಿ ಪಪೂ ಮಹಾವಿದ್ಯಾಲಯದ ಸಭಾಭವನದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಜಮಖಂಡಿ, ರಬಕವಿ ಬನಹಟ್ಟಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಗಿಂತ ಹೆಚ್ಚಾಗಿ ಯುವಕರೇ ತಂಬಾಕು ಸೇವಿಸುತ್ತಿದ್ದಾರೆ. ಯುವಕರಿಗೆ ಅದರಿಂದಾಗುವ ಹಾನಿ, ತೊಂದರೆಗಳನ್ನು ಅರ್ಥ ಮಾಡಿಸಲು ವಿಶ್ವ ತಂಬಾಕು ಮುಕ್ತ ದಿನ ಆಚರಿಸಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ರಡ್ಡೆರಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಂಬಾಕು ಹಾಗೂ ಮಾದಕ ದ್ರವ್ಯಗಳನ್ನು ಸೇವಿಸಬಾರದು. ಇದರಿಂದ ನಿಮ್ಮ ಜೀವನ ಅಷ್ಟೇ ಅಲ್ಲ, ಇಡೀ ಒಂದು ಕುಟುಂಬವೇ ಸಮಸ್ಯೆ ಎದುರಿಸುವಂತಾಗುತ್ತದೆ ಎಂದು ತಿಳಿಸಿದರು.

ಡಾ. ಮಹಾದೇವ ಪೋತರಾಜ, ಡಾ. ರಮೇಶ ಕುಂಬಾರ, ಮಾರುತಿ ನಡಕಟ್ಟಿ, ವಿಜಯ ಕಾಬರಾ, ಬಿ.ಎ. ದೇಸಾಯಿ, ಸೋಮು ನಿಂಗನೂರ, ವಿನೋದ ಘಟ್ಟೆ, ಆರ್.ಡಿ. ಬೀಳಗಿ, ಓಂಕಾರ ಯರಗಟ್ಟಿಕರ, ಅಂಜನಾ ರಾಠೋಡ, ಮಧುಮತಿ ರಾಮನಗೌಡ, ಅನಿತಾ ಹೊನವಾಡ, ಸುವರ್ಣ ವರದಾಯಿ, ಗೀತಾ ಗೊಂದಕರ, ಪದ್ಮಾ ತುಮರಮಟ್ಟಿ, ದೀಪಾ ಜಾಗಿರದಾರ, ಶೀಮಾ ಬರಗಡಗಿ, ತನುಜಾ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net