ಮೈಸೂರಿನಲ್ಲಿ ಆಟೋದಲ್ಲಿ ಪರ್ಸ್ ಕಳೆದುಕೊಂಡ ಇಂಜಿನಿಯರ್

auto
Published on

ಮೈಸೂರು: ಆಟೋ ರಿಕ್ಷಾದಲ್ಲಿ ಪ್ರಯಣಿಸುತ್ತಿದ್ದ ಸ್‌ಟಾವೇರ್ ಇಂಜಿನಿಯರ್ ಒಬ್ಬರ ಮೊಬೈಲ್ ಇದ್ದ ಬ್ಯಾಗ್ ಕಳುವಾಗಿದೆ.

ಲೋಕನಾಯಕದ ನಗರದ ನಿವಾಸಿ ಎನ್.ಪಿ.ಚಂದನ್ ಮೊಬೈಲ್ ಕಳೆದುಕೊಂಡವರು. ಮೇ.28 ರಂದು ನಗರದ ರೈಲ್ವೆ ನಿಲ್ದಾಣದಿಂದ ಮೇಟಗಳ್ಳಿಯ ಲೋಕನಾಯಕನಗರಕ್ಕೆ ಆಟೋರಿಕ್ಷಾದಲ್ಲಿ ತೆರಳಿದ್ದ ಸಂದರ್ಭ ಬ್ಯಾಗ್‌ಅನ್ನು ಆಟೋದಲ್ಲಿ ಮರೆತು ಬಿಟ್ಟು ಬಂದಿದ್ದರು. ಆದರೆ, ತಕ್ಷಣ ಆಟೋವನ್ನು ಪತ್ತೆ ಹಚ್ಚಿದರೂ ಆಟೋದಲ್ಲಿ ಮೊಬೈಲ್ ಇದ್ದ ಬ್ಯಾಗ್ ಇರಲಿಲ್ಲ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net