ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಬಿಳಿಗೇರಿ ಗ್ರಾಮದ ವೃದ್ಧ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಮಾರಿಯಪ್ಪ ಅವರ ಅತ್ತೆ ಮುನಿಯಮ್ಮ(60) ನಾಪತ್ತೆಯಾದವರು.
ಇವರು ಏ.8ರಂದು ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ಮುನಿಯಮ್ಮ ಅವರು ಪತ್ತೆಯಾದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮೊ.9480804952ಗೆ ಮಾಹಿತಿ ನೀಡಬೇಕೆಂದು ಇನ್ಸ್‌ಪೆಕ್ಟರ್ ವಸಂತ್‌ಕುಮಾರ್ ತಿಳಿಸಿದ್ದಾರೆ.