ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಜೀವಿ

IMG20241116205509.jpg
Published on

ಬೆಳಗಾವಿ: ವಿದ್ಯಾನಗರ ಆನಗೋಳ ನಿವಾಸಿ, ಜಿಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಕೈವಲ್ಯ ಯೋಗ ಆಶ್ರಮದ ಸಂಸ್ಥಾಪಕ ವಿಜಯ ಭೀಮರಾವ ಮಜಲಿ (79) ಶುಕ್ರವಾರ ನಿಧನರಾಗಿದ್ದಾರೆ. ಮೃತರ ಅಂತಿಮ ಇಚ್ಛೆಯಂತೆ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ಗೆ ದೇಹದಾನ ಮಾಡಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಇದ್ದಾರೆ.

ಮೃತರ ಎರಡು ಕಣ್ಣುಗಳನ್ನು ಕೆಎಲ್‌ಇ ಡಾ.ಪ್ರಭಾಕರ ಕೋರೆ ನೇತ್ರ ಭಂಡಾರಕ್ಕೆ ನೀಡಿ ಇಬ್ಬರ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಚರ್ಮವನ್ನು ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಕೆಎಲ್ಇ ರೋಟರಿ ಚರ್ಮ ಭಂಡಾರಕ್ಕೆ ಚರ್ಮದಾನ ಹಾಗೂ ಮೃತರ ದೇಹವನ್ನು ಕೆಎಲ್ಇ ಬಿ. ಎಂ. ಕೆ ಆಯುರ್ವೇದ ಮಹಾವಿದ್ಯಾಲಯಕ್ಕೆ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಬರೆದಿದ್ದಾರೆ. ಪ್ರಾಂಶುಪಾಲ್ ಡಾ.ಸುಹಾಸ ಕುಮಾರ ಶೆಟ್ಟಿ, ಕಾಲೇಜಿನ ರಚನಾ ಶಾರೀರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ದೇಹದಾನ ಮಾಡಿದ ಮಜಲಿ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net