

ಜಮಖಂಡಿ: ಸ್ಥಳೀಯ ಸಂಸ್ಥೆಗಳಲ್ಲಿನ ಆಡಳಿತಾತ್ಮಕ ಸಮಸ್ಯೆಗಳಿಗೆ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದೆನೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ಬಸವ ಭವನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಅಹವಾಲು ಸ್ವಿಕಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ವರ್ಷಕ್ಕೊಮ್ಮೆ ಸದಸ್ಯರ ಸಭೆ ನಡೆಸಲಾಗುವುದು, ಆಡಳಿತಾತ್ಮಕ ಯಾವುದೆ ಸಮಸ್ಯೆಗಳಿದ್ದರೆ ನಮಗೆ ತಿಳಿಸಿದರೆ ಅದರ ಬಗ್ಗೆ ಸರ್ಕಾರದ ಗಮನ ಸೆಳೆದು ಸರಿಪಡಿಸಲಾಗುವುದು ಎಂದರು.
ಕೆರಳ ಮಾದರಿಯಲ್ಲಿ ಗ್ರಾಪಂ ಸದಸ್ಯರಿಗೆ ಗೌರವಧ ಧನ ನೀಡುವಂತೆ ಮಾಡಿದ್ದೆನೆ, ಉತ್ತರ ಪ್ರದೇಶ ಮಾದರಿಯಲ್ಲಿ ಜಲಜೀವನ್ ಯೋಜನೆಗೆ ಸರ್ಕಾರವೆ ಹಣ ಭರಿಸುವಂತೆ ಮಾಡಿದ್ದೆನೆ ಎಂದರು.
ಸದಸ್ಯರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ, ತಮ್ಮ ಯಾವುದೆ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ನನಗೆ ವಾಟ್ಸಾಪ್ ಮಾಡಿ ತಿಳಿಸಿ ಅದಕ್ಕೆ ಪರಿಹಾರ ಕೊಡಿಸುವ ಕಾರ್ಯ ಮಾಡುತ್ತೆನೆ ಎಂದರು.
ಈ ಸಂದರ್ಭದಲ್ಲಿ ಕಂಕನವಾಡಿ, ಮೈಗೂರ, ಹುನ್ನೂರ ಸೇರಿದಂತೆ ತಾಲೂಕಿನ 26 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸದಸ್ಯರು, ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಪತ್ರಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ತಾಪಂ ಇಡಿ ಸಂಜು ಹಿಪ್ಪರಗಿ ಇದ್ದರು.