

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಸರ್ಕಾರ ಕಾರ್ವಿುಕರ ಮಕ್ಕಳಿಗೆ ಅನೇಕ ಯೋಜನೆ, ಸೌಲಭ್ಯ ಕಲ್ಪಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ಅವು ಕಾರ್ವಿುಕರ ಮಕ್ಕಳಿಗೆ ತಲುಪುತ್ತಿಲ್ಲ. ಕಾರ್ವಿುಕರ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆ ಎರಡ್ಮೂರು ತಿಂಗಳಿಂದ ಆಗದಿರುವುದು ಇದಕ್ಕೆ ಉದಾಹರಣೆಯಾಗಿದೆ.
ರಾಜ್ಯ ಸರ್ಕಾರ ಕಾರ್ವಿುಕ ಇಲಾಖೆಯಿಂದ ಎರಡ್ಮೂರು ತಿಂಗಳ ಹಿಂದೆಯೆ ಜಿಲ್ಲೆಯ ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ, ಹಾವೇರಿ ಸೇರಿ 8 ತಾಲೂಕುಗಳಿಗೆ ತಲಾ ಒಂದು ತಾಲೂಕಿಗೆ 187ರಂತೆ ಒಟ್ಟು 1,500 ಕಿಟ್ಗಳನ್ನು ಕಳುಹಿಸಿದೆ. ಅವುಗಳನ್ನು ಈಗಾಗಲೇ ಮಕ್ಕಳಿಗೆ ವಿತರಣೆ ಮಾಡಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ಇಂದಿಗೂ ಕಿಟ್ಗಳ ವಿತರಣೆ ಆಗಿಲ್ಲ.
ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 6ರಿಂದ 8ನೇ ತರಗತಿ ಓದುತ್ತಿರುವ ಕಟ್ಟಡ ಕಾರ್ವಿುಕರ ಮಕ್ಕಳಿಗೆ ನೀಡಲು ಕಿಟ್ಗಳು ಪೂರೈಕೆಯಾಗಿವೆ. ಶಾಲೆ ಜೂನ್ನಲ್ಲಿ ಪ್ರಾರಂಭವಾಗಿದ್ದು, ಈಗಾಗಲೇ ಅರ್ಧದಷ್ಟು ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದೆ. ಆದರೆ, ಅಧಿಕಾರಿಗಳು ಈವರೆಗೂ ಕಿಟ್ಗಳನ್ನು ವಿತರಿಸದ ಕಾರಣ ಆಯಾ ತಾಲೂಕಿನ ಕಾರ್ವಿುಕ ನಿರೀಕ್ಷಕರ ಕಚೇರಿಯಲ್ಲಿ ಕೊಳೆಯುವಂತಾಗಿದೆ.
ಸರ್ಕಾರದ ಆದೇಶದಂತೆ 8ನೇ ತರಗತಿ ಓದುತ್ತಿರುವ ಕಟ್ಟಡ ಕಾರ್ವಿುಕರ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಿಸಬೇಕು. ಕಿಟ್ಗಳು ಉಳಿದರೆ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದಿದೆ. ಆದರೆ, ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಕಾರ್ವಿುಕರ ಕಾರ್ಡ್ಗಳಿವೆ. ಅದರಲ್ಲಿ ಕಾರ್ವಿುಕರಲ್ಲದವರೇ ಹೆಚ್ಚಿದ್ದಾರೆ. ಆದ್ದರಿಂದ ಸದ್ಯ 8ನೇ ತರಗತಿಯ ಅರ್ಹ ಮಕ್ಕಳಿಗೆ ವಿತರಿಸಲು ಕಿಟ್ಗಳ ಕೊರತೆ ಎದುರಾಗಿದೆ. ಹೀಗಾಗಿ, ಯಾರಿಗೆ ಕಿಟ್ ವಿತರಣೆ ಮಾಡಬೇಕು ಎಂಬ ಗೊಂದಲ ಅಧಿಕಾರಿಗಳಿಗೆ ಎದುರಾಗಿದೆ.
ನೋಟ್ಬುಕ್, ಡ್ರಾಯಿಂಗ್ ಬುಕ್, ಪೆನ್ನು, ಪೆನ್ಸಿಲ್ ಬಾಕ್ಸ್, ಸ್ವೆಟರ್, ಸ್ಕೂಲ್ ಬ್ಯಾಗ್, ಊಟದ ಬಾಕ್ಸ್, ನೀರಿನ ಬಾಟಲಿ ಸೇರಿ ಇತರ ಒಟ್ಟು 35 ಬಗೆಯ ಸಾಮಗ್ರಿಗಳು ಸೇರಿ ಅಂದಾಜು 7,500 ರೂ. ಮೌಲ್ಯದ ವಸ್ತುಗಳು ಶೈಕ್ಷಣಿಕ ಕಿಟ್ನಲ್ಲಿವೆ. ಇದರಿಂದ ಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾಗುವ ಎಲ್ಲ ಶೈಕ್ಷಣಿಕ ಸಾಮಗ್ರಿಗಳು ದೊರೆಯಲಿವೆ.
ಕಾರ್ವಿುಕರ ಮಕ್ಕಳಿಗೆ ವಿತರಣೆ ಮಾಡಬೇಕಾದ ಶೈಕ್ಷಣಿಕ ಕಿಟ್ಗಳನ್ನು ಅಧಿಕಾರಿಗಳು ಗೋದಾಮಿನಲ್ಲಿ ಕೊಳೆಯಲು ಬಿಟ್ಟಿರುವುದು ದುರದುಷ್ಟಕರ ಸಂಗತಿ. ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಅಧಿಕಾರಿಗಳು ಕಿಟ್ ವಿತರಣೆ ಮಾಡಿಲ್ಲ. ಕೂಡಲೇ ಅಧಿಕಾರಿಗಳು ನಿಜವಾದ ಕಾರ್ವಿುಕರ ಮಕ್ಕಳಿಗೆ ಶೈಕ್ಷಣಿಕ ಕಿಟ್ಗಳನ್ನು ಕೊಡಬೇಕು. ಇಲ್ಲವಾದರೆ ಮೇಲಧಿಕಾರಿಗಳು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. | ರಾಘವೇಂದ್ರ ಈಳಿಗೇರ, ಶ್ರಮಜೀವಿ ಕಟ್ಟಡ ಹಾಗೂ ಇತರ ನಿರ್ಮಾಣ ಸಂಘದ ಕಾರ್ಯದರ್ಶಿ ಮಕ್ಕಳ ಶೈಕ್ಷಣಿಕ ಕಿಟ್ಗಳನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಶಿಷ್ಯವೇತನಕ್ಕೆ ಅರ್ಜಿ ಹಾಕಿದ ಮಕ್ಕಳ ಮಾಹಿತಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದು ಪೂರ್ಣಗೊಂಡ ಬಳಿಕ ಶೈಕ್ಷಣಿಕ ಕಿಟ್ ಕಾರ್ಯಕ್ರಮ ಎಲ್ಲರ ಸಮ್ಮುಖದಲ್ಲಿ ಏರ್ಪಡಿಸಲಾಗುವುದು. | ಅಕ್ರಂ ಬಾಷಾ, ತಾಲೂಕು ಕಾರ್ವಿುಕ ಇಲಾಖೆ ಪ್ರಭಾರ ನಿರೀಕ್ಷಕ