ಆತಿಥೇಯ ವಿಜಯಪುರ ತಂಡಕ್ಕೆ ಸುಲಭ ಜಯ

WhatsApp Image 2022-11-09 at 5.20.01 PMqqq
ವಿಜಯಪುರ ನಗರದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಿಯು ಕಾಲೇಜುಗಳ ರಾಜ್ಯಮಟ್ಟದ ಖೋಖೋ ಪಂದ್ಯಾವಳಿಯ ವೇಳೆ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡರು.
Published on

ವಿಜಯಪುರ: ಇಲ್ಲಿನ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಬುಧವಾರ ಶುಭಾರಂಭಗೊಂಡ ಪಿಯು ಕಾಲೇಜುಗಳ ರಾಜ್ಯಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಆತಿಥೇಯ ವಿಜಯಪುರ ಜಿಲ್ಲೆ ತಂಡ ಸುಲಭವಾಗಿ ಜಯಗಳಿಸಿತು.

ಬಾಲಕರ ವಿಭಾಗದಲ್ಲಿ ವಿಜಯಪುರ ತಂಡ ಕಲಬುರಗಿ ತಂಡವನ್ನು 13-08 ಅಂಕಗಳ ಅಂತರದಿಂದ ಸೋಲಿಸಿತು. ಅಲ್ಲದೆ ಗದಗ, ಮೈಸೂರು ಜಿಲ್ಲೆಗಳ ಬಾಲಕರು ಮತ್ತು ತುಮಕೂರು, ಮಂಡ್ಯ, ಬೆಳಗಾವಿ ಜಿಲ್ಲೆಗಳ ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು ತಲಾ 10 ಬಾಲಕ ಮತ್ತು ಬಾಲಕಿಯರ ತಂಡಗಳು ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.

ಬಾಲಕಿಯರ ವಿಭಾಗದ ಫಲಿತಾಂಶ ವಿವರ:
ಹಾವೇರಿ ತಂಡ ಬಳ್ಳಾರಿ ತಂಡವನ್ನು 10-08 ಅಂಕಗಳಿಂದ ಹಾಗೂ ಕಾರವಾರ ತಂಡ ಚಿತ್ರದುರ್ಗ ತಂಡವನ್ನು (11-04), ಬೆಂಗಳೂರು ಗ್ರಾಮೀಣ ತಂಡ ಕೊಡಗು ತಂಡವನ್ನು (09-08), ಬೆಂಗಳೂರು ಉತ್ತರ ತಂಡ ದಾವಣಗೆರೆ ತಂಡವನ್ನು (15-01),ಬೆಳಗಾವಿ ತಂಡ ಚಾಮರಾಜನಗರ ತಂಡವನ್ನು (13-06), ಚಿಕ್ಕೋಡಿ ತಂಡ ಧಾರವಾಡ ತಂಡವನ್ನು (15-04), ರಾಯಚೂರು ತಂಡ ಗದಗ ತಂಡವನ್ನು (17-01), ಮೈಸೂರು ತಂಡ ರಾಮನಗರ ತಂಡವನ್ನು (22-02), ಮಂಡ್ಯ ತಂಡ ವಿಜಯನಗರ ತಂಡವನ್ನು (15-02), ತುಮಕೂರು ತಂಡ ಕಲಬುರಗಿ ತಂಡವನ್ನು (09-04) ಅಂಕಗಳ ಅಂತರದಿಂದ ಸೋಲಿಸಿದವು.

ಬಾಲಕರ ವಿಭಾಗ :

ಮೈಸೂರು ತಂಡ ವಿಜಯನಗರ ತಂಡವನ್ನು (15-12), ಗದಗ ತಂಡ ಚಿತ್ರದುರ್ಗ ತಂಡವನ್ನು (20-08), ಬೀದರ್ ತಂಡ ಮಂಡ್ಯ ತಂಡವನ್ನು (17-07), ಯಾದಗಿರಿ ತಂಡ ಧಾರವಾಡ ತಂಡವನ್ನು (08-07), ಬೆಂಗಳೂರು ದಕ್ಷಿಣ ತಂಡ ಶಿವಮೊಗ್ಗ ತಂಡವನ್ನು (18-17), ರಾಮನಗರ ತಂಡ ಕೊಡಗು ತಂಡವನ್ನು (17-11), ಬಾಗಲಕೋಟೆ ತಂಡ ಕೊಪ್ಪಳ ತಂಡವನ್ನು (15-13), ತುಮಕೂರು ತಂಡ ಉತ್ತರ ಕನ್ನಡ ತಂಡವನ್ನು (17-09),ಚಿಕ್ಕೋಡಿ ತಂಡ ಕೋಲಾರ ತಂಡವನ್ನು (15-08), ವಿಜಯಪುರ ತಂಡ ಕಲಬುರಗಿ ತಂಡವನ್ನು (13-08) ಅಂಕಗಳ ಅಂತರದಿಂದ ಮಣಿಸಿ ಎರಡನೇ ಸುತ್ತಿನತ್ತ ಮುನ್ನಡೆ ಸಾಧಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net