ಪ್ರಶಸ್ತಿಯಿಂದ ಕೆಲಸ ಮಾಡಲು ಸ್ಪೂರ್ತಿ ಹೆಚ್ಚುತ್ತದೆ; ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಮತ

award
Published on

ಬೆಂಗಳೂರು: ಕಾರ್ಯಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ ಅವರಿಗೆ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ಸ್ಪೂರ್ತಿ ಬರುತ್ತದೆ ಎಂದು ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಕನ್ನಡ ಸಂಘರ್ಷ ಸಮಿತಿಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬಿ.ಎಂ.ಶ್ರೀ ಕಲಾಭವನದಲ್ಲಿ ದಿ. ರಹಮಾನ್ ಖಾನ್ ಸ್ಮಾರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಹಾಗೂ ಪತ್ರಕರ್ತ ಮಹೇಶ್ ಊಗಿನಹಳ್ಳಿಗೆ ಕನ್ನಡ ಕಟ್ಟಾಳು ಪ್ರಶಸ್ತಿ ಮತ್ತು ಕನ್ನಡ ಹೋರಾಟಗಾರ್ತಿ ಎಂ.ಬಿ. ವಿಜಯಲಕ್ಷ್ಮೀಗೆ ನಿಶ್ಚಿಮ ಕನ್ನಡತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪಂಪ,ರನ್ನ ಹಾಗೂ ಬಸವಣ್ಣರಿಂದ ಕನ್ಮಡದ ಪ್ರಜ್ಞೆಯು ಜಾತಿ ಮತ ಪಂಥಗಳನ್ನು ವೀರಿ ಬೆಳೆದಿದೆ ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಂಪರೆಯನ್ನು ನೋಡಬಹುದು. ಅಂತಹ ಕನ್ನಡ ಕಟ್ಟುವ ಕೆಲಸದಲ್ಲಿ ಅಸಂಖ್ಯಾತ ಕಾರ್ಯಕರ್ತರ ಶ್ರಮವಿದೆ. ಅವರನ್ನು ಸನ್ಮಾನಿಸಿದಾಗ ಮತ್ತಷ್ಟು ಜನರಿಗೆ ಕನ್ನಡದ ಕೆಲಸ ಮಾಡಲು ಉತ್ಸಾಹ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ರಾಜಕೀಯ ವ್ಯವಸ್ಥೆಯ ವೈಪರೀತ್ಯಗಳಿಂದಾಗಿ ಪರಿಸ್ಥಿತಿ ಬದಲಾಗುತ್ತಿದೆ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡಪರ ಚಿಂತಕ ರಾಮಣ್ಣ ಎಚ್ ಕೋಡಿಹೊಸಹಳ್ಳಿ, ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ್, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಎ. ಎಸ್. ನಾಗರಾಜಸ್ವಾಮಿ, ಪ್ರಧಾನ ಕಾರ್ಯದರ್ಶಿ ತಾ.ಸಿ.ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net