ಆರ್​ಎಸ್​ಎಸ್​ನಿಂದ ಆಕರ್ಷಕ ಪಥಸಂಚಲನ

12dvk 9B
Published on

ಬೆಳಗಾವಿ: ರಾಷ್ಟ್ರೀಯ ಸ್ವಯಂ ಸೇವಕ ಸಂದ ಶತಮಾನೋತ್ಸವ ಆಚರಣೆ ಹಾಗೂ ವಿಜಯ ದಶಮಿ ಪ್ರಯುಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಆಕರ್ಷಕ ಗಣವೇಷಧಾರಿಗಳ ಪಥಸಂಚಲನ ಕುಂದಾ ನಗರಿಯಲ್ಲಿ ರಾಷ್ಟ್ರ ಜಾಗೃತಿಯ ಕಂಪು ಹರಡಿತು.

ಆರ್​ಎಸ್​ಎಸ್​ ನಗರ ಟಕದಿಂದ ಭಾನುವಾರ ಸಂಜೆ ಸರದಾರ್ಸ್​ ಮೈದಾನದಿಂದ ಎರಡು ವಿಭಾಗಗಳಲ್ಲಿ ಹೊರಟ ಗಣವೇಷಧಾರಿಗಳ ದೇಶಪ್ರೇಮದ ಠೀವಿಯ ನಡಿಗೆ ವೀಕ್ಷಿಸಲು ಬೀದಿಯುದ್ದಕ್ಕು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲಲ್ಲಿ ರಂಗೋಲಿ ಹಾಕಿ ಸ್ವಾಗತಿಸಿಕೊಂಡರು. ಕೆಲವೆಡೆ ಬೀದಿಯುದ್ದಕ್ಕೂ ರತ್ನಗಂಬಳಿಯಂತೆ ಹೂವು ಹಾಕಲಾಗಿತ್ತು. ಕೆಲವೆಡೆ ಸ್ವಯಂ ಸೇವಕರ ಮೇಲೆ ಪುಷ್ಪವೃಷ್ಟಿಗೈದರು. ರಸ್ತೆ ಪಕ್ಕದಲ್ಲಿ ಭಾರತಮಾತೆ ಮತ್ತು ವಿವಿಧ ರಾಷ್ಟ್ರ ಪುರುಷರ ಮತ್ತು ವನಿತೆಯ ವೇಷದಲ್ಲಿ ಸ್ವಾಗತ ಕೋರಿದರು. ಪಥ ಸಂಚಲನದುದ್ದಕ್ಕೂ ಜೈ ಶ್ರೀರಾಮ, ಹರ ಹರ ಮಹಾದೇವ, ಭಾರತ ಮಾತಾ ಕೀ ಮತ್ತು ವಂದೇ ಮಾತರಂ ೂಷಣೆ ಮೊಳಗಿದವು.

ರಾಣಿ ಚನ್ನಮ್ಮ ವೃತ್ತ, ಚವಾಟ್​ಗಲ್ಲಿ , ಬಡಕಲ್​ ಗಲ್ಲಿ, ಶನಿವಾರ ಕೂಟ್​, ಗಣಪತಿಗಲ್ಲಿ, ಶನಿಮಂದಿರ, ಕುಲಕರ್ಣಿ ಗಲ್ಲಿ ಮಾರ್ಗದಲ್ಲಿ ಒಂದು ತಂಡ ಹಾಗೂ ಲಿಂಗರಾಜ ವೃತ್ತ, ಕಾಕತಿ ವೇಸ್​, ರಿಸಲ್ದಾರ್​ ಗಲ್ಲಿ, ಗವಳಿ ಗಲ್ಲಿ, ಸಮಾದೇವಿ ಗಲ್ಲಿ, ಕಡೋಲಕರ ಗಲ್ಲಿ, ಮಾರುತಿಗಲ್ಲಿ, ಬಸವನಗಲ್ಲಿ ಮೂಲಕ ಮತ್ತೊಂದು ತಂಡ ಸಂಚರಿಸಿ, ಎರಡೂ ತಂಡಗಳು ಟಿಳಕ ವೃತ್ತದಲ್ಲಿ ಏಕಕಾಲಕ್ಕೆ ಸಂಗಮಗೊಂಡವು. ಈ ಸಂಗಮ ಕಣ್ತುಬ್ಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಬಳಿಕ ರಾಮಲಿಂಗಖಿಂಡ ಗಲ್ಲಿ ಧರ್ಮವೀರ ಸಂಭಾಜಿ ವೃತ್ತ ಕಾಲೇಜುರಸ್ತೆ ಮೂಲಕ ಸಂಚರಿಸಿ ಲಿಂಗರಾಜ ಮೈದಾನದಲ್ಲಿ ಸಮಾರೋಪಗೊಂಡಿತು.

ಗಮನ ಸೆಳೆದ ಸ್ತಬ್ಧಚಿತ್ರ: ಪಥ ಸಂಚಲನದಲ್ಲಿ ತೆರೆದ ವಾಹನದಲ್ಲಿ ಡಾ. ಹೆಡಗೆವಾರ ಮತ್ತು ಗುರೂಜಿ ಭಾವಚಿತ್ರದ ಜತೆಗೆ ಆಳೆತ್ತರದ ಅಖಂಡ ಭಾರತ ನಕಾಶೆಯ ಸ್ತಬ್ಧಚಿತ್ರ ಅಳವಡಿಸಲಾಗಿತ್ತು. ಈ ನಕಾಶೆಯ ಜನರ ಗಮನ ಸೆಳೆಯಿತು. ಸ್ವಾತಂತ್ರ ಪೂರ್ವದ ನಕಾಶೆಯನ್ನು ಸಂಪೂರ್ಣ ಹೂವುಗಳಿಂದ ಕೇಸರಿಮಯವನ್ನಾಗಿಸಲಾಗಿತ್ತು. ಇದನ್ನು ನೋಡಿದ ತಕ್ಷಣವೇ ಕೆಲ ಜನ ಕೈ ಮುಗಿದರು, ಇನ್ನು ಕೆಲವರು ಜನ ಸೆಲ್ಯೂಟ್​ ಹೊಡೆದು ಗೌರವ ಸಲ್ಲಿಸಿದರು.

ಗಣ್ಯರ ಭಾಗಿ: ಪಥ ಸಂಚಲನದಲ್ಲಿ ಸಂಸದ ಜಗದೀಶ ಶೆಟ್ಟರ, ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿ ವಿವಿಧ ಗಣ್ಯರು ಸಾಮಾನ್ಯ ಸ್ವಯಂ ಸೇವಕರಂತೆ ಗಣವೇಷದಲ್ಲಿ ಪಾಲ್ಗೊಂಡು, ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net