

ಪುತ್ತೂರು: ಮುಖ್ಯರಸ್ತೆಯ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಪ್ರಯುಕ್ತ ಜಿ.ಎಲ್. ಸ್ವರ್ಣ ಹಬ್ಬ ಅ.7ರಿಂದ 13ರ ವರೆಗೆ ನಡೆಯಲಿದ್ದು, ಗ್ರಾಹಕರಿಗೆ ನವರಾತ್ರಿಯ ಈ ಹಬ್ಬದ ಋತುವಿನಲ್ಲಿ ಸ್ವರ್ಣ ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆಗಳನ್ನು ಸಂಸ್ಥೆ ಪ್ರಕಟಿಸಿದೆ.
ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ. ಷರತ್ತುಗಳ ಅನ್ವಯದೊಂದಿಗೆ ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂಗೆ 200 ರೂ.ವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ 5 ಸಾವಿರ ರೂ. ವರೆಗೆ ಪ್ರತಿ ಕ್ಯಾರೆಟ್ ಮೇಲೆ ರಿಯಾಯಿತಿ ಹಾಗೂ ಬೆಳ್ಳಿಯ ಆಭರಣಗಳ ಮೇಲೆ 2 ಸಾವಿರ ರೂ. ಪ್ರತಿ ಕೆಜಿಗೆ ರಿಯಾಯಿತಿ ನೀಡಲಾಗುವುದು ಹಾಗೂ ಚಿನ್ನಾಭರಣಗಳ ಖರೀದಿಗೆ ವಿಎ ಶೇ.8ರಿಂದ ಕೊಡುಗೆ ಆರಂಭವಾಗುತ್ತದೆ.
ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆ್ಯಂಟಿಕ್ ಆಭರಣಗಳು, ಅನ್‌ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದೆ. ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದೆ. ಈ ಜಿ.ಎಲ್. ಸ್ವರ್ಣ ಹಬ್ಬ ಈ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.