ಅಕ್ಕಿಆಲೂರಲ್ಲಿ ಗಮನ ಸೆಳೆದ ಮೆರವಣಿಗೆ

AKR EED
Published on

ಅಕ್ಕಿಆಲೂರ: ಪ್ರವಾದಿ ಮಹ್ಮದ ಪೈಗಂಬರ್ ಅವರ ಜನ್ಮದಿನವಾದ ಜಶ್ನೆ ಈದ್ ಮಿಲಾದ ಹಬ್ಬವನ್ನು ಪಟ್ಟಣದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಮಖಬೂಲಿಯಾ ಜಾಮಿಯಾ ಮಸೀದಿಯಲ್ಲಿ ಕೊನೆಗೊಂಡಿತು. ಮೆರವಣಿಗೆ ಉದ್ದಕ್ಕೂ ಪ್ರವಾದಿ ಮಹ್ಮದ ಪೈಗಂಬರ್ ಅವರ ಜೀವನ, ಸಂದೇಶಗಳ ಮೇಲೆ ಕವನ ವಾಚಿಸಲಾಯಿತು. ಮಹ್ಮದ್ ಪೈಗಂಬರ್ ಅವರ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಲಾಯಿತು. ಮಾರ್ಗದಲ್ಲಿ ಅಲ್ಲಲ್ಲಿ ತಂಪು ಪಾನೀಯ ಹಾಗೂ ಸಿಹಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಗೆಜ್ಜಿಹಳ್ಳಿ ಹೊರವಲಯದ ದಾರುಲ್ ಹುದಾ ಇಸ್ಲಾಮಿಯಾ ಆಫ್ ಕ್ಯಾಂಪಸ್ ಹಾಗೂ ವಿವಿಧ ಮದರಸಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಗ್ರಾ.ಪಂ.ಅಧ್ಯಕ್ಷ ಮಖಬೂಲ ಅಹ್ಮದ ರುಸ್ತುಂಖಾನವರ, ಅಂಜುಮನ್ ಎ ಇಸ್ಲಾಂ ಸುನ್ನಿ ಹನಫಿ ಅಧ್ಯಕ್ಷ ಮೆಹಬೂಬ ಅಲಿ ಬ್ಯಾಡಗಿ, ಭೂ ನ್ಯಾಯ ಮಂಡಳಿ ಸದಸ್ಯ ಯಾಸೀರ ಅರಾಫತ್ ಮಕಾನದಾರ, ರಿಯಾಜ ಹಾವಣಗಿ, ಎ.ಎಚ್.ಹುಬ್ಬಳ್ಳಿ, ಮೌಲಾನಾ ಅಹ್ಮದ ಬಾಶಾ ಶೇಖಜಿ, ಮೌಲಾನಾ ರಫೈ ಬಾಶಾ, ಹಾಫಿಜ ನಿಸಾರ ಅಹ್ಮದ, ಖಾಜಾಮೊದೀನ ಅಣ್ಣಿಗೇರಿ, ಸಾಧಿಕ ಮಳಗಿ, ಜಹೀರ ಹಸನಾಬಾದಿ, ಅಬ್ದುಲ್ ಹಾಫಿಜ ಲಾಲಾನವರ, ಮುನೀರ ಬಾಳೂರ, ಮುಶ್ತಾಕ ಕಾರಡಗಿ, ಕಲೀಮುಲ್ಲಾ ಚನ್ನಾಪುರ, ಸಾಧಿಕ ಹಸನಾಬಾದಿ, ಮಹ್ಮದ ಖಾಜಿ, ಇಮ್ತಿಯಾಜ ಸಿಲಾರ, ಮಖಬೂಲಸಾಬ ಚಾವೂಸ, ಖಾಸಿಮ ಶಿಡೇನೂರ, ಅಲ್ತಾಫ ಅಹ್ಮದ ಅತ್ತಾರ, ಮಹೆದ್ದೀನ ಸೈಕಲ್ಗಾರ, ಇರ್ಫಾನ ಬಂಕಾಪುರ, ಅಬ್ದುಲ್ ರಹೀಮ ಮಕಾನದಾರ, ಸುಲೇಮಾನ ಶೇಖ, ನಸರುಲ್ಲಾ ಉಪ್ಪಣಸಿ, ನೂರ ಅಹ್ಮದ ಅತ್ತಾರ, ಆರೀಫ ಪಾಟೀಲ, ಮೊದಿನಶಾ ಪೀರಾ, ಜಹೀರ ಲಾಲಾನವರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net