ಗಮನ ಸೆಳೆದ ಸಂಗೀತ ಕಾರ್ಯಕ್ರಮ

21 NRD 2
Published on

ನರಗುಂದ: ಪುಣ್ಯಾರಣ್ಯ ಪತ್ರಿವನಮಠದಲ್ಲಿ ಲಿಂ. ಶ್ರೀ ಗುರು ಶಿವಯ್ಯಜ್ಜ ಹಾಗೂ ಶ್ರೀ ಶಂಭುಲಿಂಗ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಗುರುವರ್ಯ ಗಾಯನಾಚಾರ್ಯ ದತ್ತುಬುವಾ ಇನಾಮದಾರ ಗವಾಯಿಗಳ 38ನೇ ಪುಣ್ಯ ಸ್ಮರಣೆ ಹಾಗೂ ಸ್ವರ ಶ್ರದ್ಧಾಂಜಲಿ ಸಂಗೀತ ಸಭೆಯನ್ನು ಡಾ.ಗುರುಸಿದ್ಧವೀರ ಶಿವಾಚಾರ್ಯರು ಇತ್ತೀಚೆಗೆ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದತ್ತುಬುವಾ ಇನಾಮದಾರ ಸಂಗೀತ ಬಳಗದ ಶಿಷ್ಯರು, ಅಭಿಮಾನಿ ಬಳಗದ ಕಲಾವಿದರು ಸೇರಿ 40ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಾದ್ಯ ಸಂಗೀತ ನಿನಾದ ಪ್ರಸ್ತುತಪಡಿಸಿ ಗಮನ ಸೆಳೆದರು. ಗೋವಿಂದರಾಜ ಗುಡಿಸಾಗರ ಅಧ್ಯಕ್ಷತೆ ವಹಿಸಿದ್ದರು. ಶ್ರೀಪಾದ ಕುರುಗೋವಿನಕೊಪ್ಪ, ಚೇತನಕುಮಾರ ಇನಾಮದಾರ, ಡಾ.ಶ್ರೀಕಾಂತ ಅಡ್ಡಣಗಿ, ಸಿದ್ದಪ್ಪ ಬೆಂತೂರ, ಪ್ರಶಾಂತ ಜೋಶಿ, ಶ್ರೀನಿವಾಸ ಇನಾಮದಾರ, ಗಂಗಾಧರ ಗುಡಾರದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net