ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಪ್ರಯತ್ನ

An attempt to tarnish the Virendra Heggade family of Dharamsthala
Published on

ವಿಜಯಪುರ:ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಸಂಚು ರೂಪಿಸುತ್ತಿರುವವರ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ನಗರದಲ್ಲಿ ಆ. 13 ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ವೇದಿಕೆ ಪ್ರಮುಖ ಅಶೋಕ ಅಲ್ಲಾಪುರ ತಿಳಿಸಿದರು.

ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರಕಿಸುವ ಹೆಸರಿನಲ್ಲಿ ಧರ್ಮಸ್ಥಳ ೇತ್ರದ ಮೇಲೆ ದಾಳಿ ನಡೆಯುತ್ತಿದೆ. ಅದು ಹೀಗೆಯೇ ಮುಂದುವರಿದರೆ, ಸಮಾಜದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಲಿದೆ. ಹೀಗಾಗಿ, ಭಕ್ತರು ಹಾಗೂ ಧರ್ಮಸ್ಥಳ ೇತ್ರದಿಂದ ಅನುಕೂಲ ಪಡೆದ ಭಕ್ತರು ಅಂದು ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಈಗಾಗಲೇ ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ 15 ಸ್ಥಳಗಳನ್ನು ಗುರುತಿಸಿ ಗುಂಡಿ ತೋಡಿ ಪರಿಶೀಲಿಸಲಾಗುತ್ತಿದೆ. ಆದರೆ, ಯಾವುದೇ ಕುರುಹುಗಳು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಅಲ್ಲದೆ, ಹಲವು ವರ್ಷಗಳ ಹಿಂದೆ ಹೂತಿರುವ ಶವಗಳನ್ನೂ ಶ್ರೀಗಳ ತಲೆಗೆ ಕಟ್ಟುವ ಹುನ್ನಾರ ನಡೆಯುತ್ತಿದೆ. ಹೀಗಾಗಿ, ಅನಾಮಿಕ ವ್ಯಕ್ತಿಯ ದೂರುಗಳನ್ನು ಪರಿಗಣಿಸಬಾರದು. ಜತೆಗೆ ಈ ದೂರುದಾರನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸೌಜನ್ಯ ಪ್ರಕರಣದ ಸಾಗಳಿವೆ ಎಂದು ಭಾಷಣದ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿರುವ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮೆಟ್ಟಣ್ಣನವರ, ಸಮೀರ ಎಂ.ಡಿ., ಸಂತೋಷ ಶೆಟ್ಟಿ, ಜಯಂತ ಟಿ., ಅಜಯ್​ ಅಂಚನ ಅವರನ್ನು ವಿಚಾರಣೆಗೆ ಒಳ ಪಡಿಸಬೇಕಲ್ಲದೆ, ಅವರ ಬ್ಯಾಂಕ್​ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈಗಿರುವ ಎಸ್​ಐಟಿ ತಂಡದ ಜತೆಗೆ ಮತ್ತೊಂದು ಎಸ್​ಐಟಿ ತನಿಖೆ ತಂಡ ರಚಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ವಿ.ಪ. ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಸೌಜನ್ಯ ಪ್ರಕರಣದ ಸಿಬಿಐ ತನಿಖೆ ನಡೆದು ವರದಿ ಬಂದಿದೆ. ಅದರ ನಂತರವೂ ಧರ್ಮಾಧಿಕಾರಿಗಳ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡುವ ಮೂಲಕ ಅವರನ್ನು ಗುರಿಯಾಗಿಸಲಾಗಿದ್ದು, ಖಂಡನೀಯ ಎಂದರು.

ಮುಖಂಡರಾದ ಅಪ್ಪುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಶಿವಾನಂದ ದೇಸಾಯಿ, ಎಸ್​.ವಿ. ಪಾಟೀಲ, ಶೀತಲಕುಮಾರ ಒಗಿ, ರಾಜಶೇಖರ ಮಗಿಮಠ, ವಿಜಯ ಜೋಶಿ, ಪ್ರವಿಣ ಕಾಸರ, ಸಂಗನಗೌಡ ಬಿರಾದಾರ ಇತರರಿದ್ದರು.

ವಿಜಯಪುರದ ಖಾಸಗಿ ಹೋಟೆಲ್​ದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಶೋಕ ಅಲ್ಲಾಪುರ ಮಾತನಾಡಿದರು. ಶೀತಲಕುಮನಾರ ಒಗಿ, ಅಪ್ಪುಗೌಡ ಪಾಟೀಲ, ಚಂದ್ರಶೇಖರ ಕವಟಗಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net