

ಮುಂಡರಗಿ: ಕೆಲವು ಚಿಕಿತ್ಸೆಗಳು ಹೋಮಿಯೋಪಥಿ ಮತ್ತು ಆಯುರ್ವೆದಿಕ್ನಲ್ಲೂ ಚೆನ್ನಾಗಿವೆ. ಉ.ಕ. ಭಾಗದಲ್ಲಿ ಕೆಲವೊಂದು ವೈದ್ಯಕೀಯ ಕಾಲೇಜ್ಗಳ ಅವಶ್ಯಕತೆ ಹೆಚ್ಚಿದೆ. ಅದಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತೇನೆ. ಹಾಗೆಯೆ ವೈದ್ಯಕೀಯ ಪ್ರಾಧ್ಯಾಪಕರ ಸಮಸ್ಯೆಗಳನ್ನು ಬಗೆಹರಿಸುವಂತ ಕೆಲಸ ಮಾಡಲಾಗುವುದು ಎಂದು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ವೀರೇಶ ಹಂಚಿನಾಳ ಹೇಳಿದರು.
ಪಟ್ಟಣದಲ್ಲಿ ಡಾ. ವೀರೇಶ ಹಂಚಿನಾಳ ಅವರು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆ ಸ್ಥಳೀಯ ವೈದ್ಯರು, ಅವರ ಅಭಿಮಾನಿಗಳು ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೆಡಿಕಲ್, ಡೆಂಟಲ್, ಹೋಮಿಯೋಪತಿ, ಆಯುರ್ವೆದಿಕ್, ಸಿದ್ಧಿ, ಯುನಾನಿ, ಫಾರ್ಮಸಿ, ನರ್ಸಿಂಗ್ ಕಾಲೇಜು ಸೇರಿ ರಾಜ್ಯದಲ್ಲಿ 3 ಸಾವಿರ ವೈದ್ಯಕೀಯ ಕಾಲೇಜುಗಳಿವೆ. ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಉಪಯುಕ್ತವಾಗುವಂತ ಕೆಲಸಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ವೈದ್ಯ ಡಾ.ಅನ್ನದಾನಿ ಮೇಟಿ, ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಮಾತನಾಡಿದರು. ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸ್ಥಾಯಿಸಮಿತಿ ಅಧ್ಯಕ್ಷ ಮಹ್ಮದರಫಿ ಮುಲ್ಲಾ, ಡಾ.ವಿ.ಕೆ. ಸಂಕನಗೌಡ, ಈಶ್ವರಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಬಸವರಾಜ ಹಂಚಿನಾಳ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಸೀತಾರಾಮರಾಜು, ಈರಣ್ಣ ಕರ್ಜಗಿ, ಇತರರಿದ್ದರು.
ರಜನಿಕಾಂತ ದೇಸಾಯಿ, ಸಿದ್ದಲಿಂಗಪ್ಪ ದೇಸಾಯಿ ಹಾಗೂ ಮುತ್ತು ಅಳವಂಡಿ ಕಾರ್ಯಕ್ರಮ ನಿರ್ವಹಿಸಿದರು.