ಭೂಸ್ವಾಧಿನದಿಂದ ರೈತರ ಜಮೀನು ಕಬಳಿಸುವ ಯತ್ನ

oplus_4194304
oplus_4194304
Published on

ಮಾಜಿ ಶಾಸಕ ಎ.ಮಂಜುನಾಥ್​ ಆರೋಪ

ಬಿಡದಿ: ಭೂಸ್ವಾಧಿನದ ಹೆಸರಿನಲ್ಲಿ ಸಾವಿರಾರು ರೈತರ ಸಮಾಧಿ ಮೇಲೆ ಸೌಧ ಕಟ್ಟಲು ಸರ್ಕಾರ ಹೊರಟಿದೆ. ಪೊಲೀಸರನ್ನು ಮುಂದೆ ಬಿಟ್ಟು, ಸರ್ವೇ ಮಾಡಲು ಮುಂದಾದರೆ ರಕ್ತಪಾತವಾಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್​ ಎಚ್ಚರಿಕೆ ನೀಡಿದರು.

ಬಿಡದಿ ಟೌನಶಿಪ್​ಗಾಗಿ ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡಿ, ಆ ಮೂಲಕ ರೈತರ ಜಮೀನು ಕಬಳಿಸುವ ಸರ್ಕಾರದ ಸಂಚಿನ ವಿರುದ್ಧದ ಹೋರಾಟ ಮುಂದುವರಿಯುತ್ತದೆ ಎಂದು ಶುಕ್ರವಾರ ಇಲ್ಲಿನ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೂ ಸಭೆ ಮಾಡಿಲ್ಲ:ಟೌನ್​ಶಿಪ್​ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವೊಬ್ಬ ರೈತನನ್ನೂ ಕರೆದು ಅವರ ಕಷ್ಟ&ಸುಖ ಕೇಳಿಲ್ಲ. ಕಷ್ಟ ಹೇಳಲು ಬಂದ ರೈತರಿಗೆ ಧಮ್ಕಿ ಹಾಕುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಎ.ಮಂಜುನಾಥ್​, ಇಲ್ಲಿನ ಜಿಲ್ಲಾಧಿಕಾರಿಗಳೂ ನೀವು ಹೇಳಿದಂತೆಯೇ ಕೇಳುತ್ತಿದ್ದಾರೆ. ಎಲ್ಲದಕ್ಕೂ ಕೊನೇ ಬರುತ್ತದೆ. ರೈತರಪರ ಕಾಳಜಿ ಇದ್ದರೆ ಯೋಜನೆಯನ್ನು ಕೈಬಿಡಿ ಎಂದು ಒತ್ತಾಯಿಸಿದರು.

ನ್ಯಾಯಾಲಯಕ್ಕೆ ಅರ್ಜಿ:

ಭೂಸ್ವಾಧಿನಕ್ಕೆ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್​ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೆಲವರು ಪತ್ರ ತೋರಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಶ್ರೀದಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಸ್ವಾಧಿನಕ್ಕೆ ವಿರೋಧ ಮಾಡುತ್ತೇವೆ ಎಂದ ಎ.ಮಂಜುನಾಥ್​, ಪ್ರಾಧಿಕಾರದ ನಿರ್ದೇಶಕರಾಗಿ ಮಾಜಿ ಸಂಸದ ಡಿ.ಕೆ.ಸುರೇಶ್​ ಅವರನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಹಾಲಿ ಸಂಸದ ಡಾ.ಸಿ.ಎನ್​.ಮಂಜುನಾಥ್​ ಅವರನ್ನೂ ನಾಮನಿರ್ದೇಶಕರನ್ನಾಗಿ ಸೇರಿಸಿಕೊಳ್ಳಬೇಕಿತ್ತಲ್ಲವೇ ಎಂದರು.

ಹೋರಾಟದಲ್ಲಿ ಎಚ್​ಡಿಡಿ, ಎಚ್​ಡಿಕೆ ಭಾಗಿ:

ಕುಮಾರಸ್ವಾಮಿ ಅವರು 5 ಟೌನ್​ಶಿಪ್​ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಅದರಲ್ಲಿ ಸಾತನೂರು ಒಂದು. ನಿಮ್ಮದೇ ೇತ್ರದಲ್ಲಿ ಟೌನ್​ಶಿಪ್​ ನಿರ್ಮಾಣ ಮಾಡಿ, ನಿಮ್ಮ ತಾಲೂಕಿನ ಜನರಿಗೆ ಚಿನ್ನದ ಬೆಲೆ ಕೊಡಿಸಿ ಎಂದು ಉಪಮುಖ್ಯಮಂತ್ರಿಗಳಿಗೆ ಎ.ಮಂಜುನಾಥ್​ ಒತ್ತಾಯಿಸಿದರಲ್ಲದೇ ಭೂಸ್ವಾಧಿನ ವಿರೋಧಿ ಹೋರಾಟಕ್ಕೆ ಮಾಜಿ ಪ್ರಧಾನಮಂತ್ರಿ ಎಚ್​.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾದ್ಯ ವಿಜಯೇಂದ್ರ, ವಿಪಕ್ಷ ನಾಯಕ ಆರ್​.ಅಶೋಕ್​ ಸೇರಿ ಎರಡೂ ಪಗಳ ಹಿರಿಯ ನಾಯಕರನ್ನು ಕೇತ್ರಕ್ಕೆ ಕರೆಸಲಾಗುವುದು ಎಂದರು.

ಬೇನಾಮಿ ಹೆಸರಲ್ಲಿ ಜಮೀನು ಖರೀದಿ:

ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡುವ 6 ತಿಂಗಳ ಹಿಂದೆ ಹಾಗೂ ನಂತರದ ದಿನಗಳಲ್ಲಿ ಬೇನಾಮಿ ಹೆಸರುಗಳಲ್ಲಿ ಆಡಳಿತಾರೂಢ ಸಚಿವರು, ಶಾಸಕರ ಜತೆಗೆ ಜಿಲ್ಲೆಯ ಕೆಲ ಅಧಿಕಾರಿಗಳೂ ಜಮೀನು ಖರೀದಿಸಿದ್ದಾರೆ. ರಾಮನಗರ ಸಬ್​ರಿಜಿಸ್ಟ್ರಾರ್​ ಕಚೇರಿಯಲ್ಲಿ ನೋಂದಣಿ ಮಾಡಿಸಿದರೆ ಗೊತ್ತಾಗುತ್ತದೆ ಎಂದು ಕನಕಪುರ, ಚನ್ನಪಟ್ಟಣ, ಮಾಗಡಿ, ಬ್ಯಾಟರಾಯನಪುರದ ಸಬ್​ರಿಜಿಸ್ಟ್ರಾರ್​ ಕಚೇರಿಗಳಲ್ಲಿ ನೋಂದಣಿ ಮಾಡಿಸಲಾಗಿದೆ ಎಂದರು.

ಸೋಮೇಗೌಡ, ನರಸಿಂಹಯ್ಯ, ಕಲೀಲ್​, ಪುರಸಭೆ ಸದಸ್ಯರಾದ ನಾಗರಾಜು, ಸೋಮಶೇಖರ್​, ರಮೇಶ್​ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

10,600 ಎಕರೆಯಲ್ಲಿ ಅರ್ಧದಷ್ಟು ಸರ್ಕಾರಿ ಜಾಗ ಇದ್ದು, ಅದರ ಮೇಲೆ ಸಾಲ ತರುವ ಯೋಜನೆ ರೂಪಿಸಿದ್ದರು. ಆದರೆ ಕೇವಲ 700 ಎಕರೆ ಮಾತ್ರ ಸರ್ಕಾರಿ ಜಾಗವಿರುವುದು ಅವರದ್ದೇ ಸರ್ವೇಯಲ್ಲಿ ಗೊತ್ತಾಗಿದೆ. ಈಗ ಎಲ್ಲಿಂದ ಸಾವಿರಾರು ಕೋಟಿ ರೂ. ತರುತ್ತಾರೆ? ಇವರಿಗೆ ಯಾರು ಸಾಲ ಕೊಡುತ್ತಾರೆ?. ಎ.ಮಂಜುನಾಥ್​ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net