ಕಿಡಿಗೇಡಿಗಳಿಂದ ಶಾಂತಿ ಕದಡುವ ಯತ್ನ: ಆಯನೂರು

ayanur manjunath
ಆಯನೂರು ಮಂಜುನಾಥ್, ಮಾಜಿ ಎಂಎಲ್‌ಸಿ
Published on

ಶಿವಮೊಗ್ಗ: ಕೆಲವು ಕೆಡಿಗೇಡಿಗಳು ಶಾಂತಿ ಕದಡುವ ಯತ್ನ ಮಾಡಿದ್ದಾರೆ. ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಹೇಳಿದರು.

ಕೆಲವು ಕಟೌಟ್, ಬ್ಯಾನರ್‌ಗಳು ವಿವಾದಾತ್ಮಕವಾಗಿದ್ದರೂ ಅವುಗಳನ್ನು ತೆರವುಗೊಳಿಸಲು ಪೊಲೀಸರು ಏಕೆ ಸೂಚಿಸಲಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಹೆಚ್ಚು ಮಾತನಾಡಿ ವಿಷಯವನ್ನು ಜೀವಂತವಾಗಿರಿಸಲು ಬಯಸುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಹುಶಃ ಮೆರವಣಿಗೆಗೂ ಮುನ್ನ ಬ್ಯಾನರ್‌ಗಳನ್ನು ತೆರವು ಮಾಡಲು ಸೂಚನೆ ನೀಡಿದ್ದರೆ ಇನ್ನಷ್ಟು ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಸುಮ್ಮನಾಗಿರಬಹುದು. ಆದರೆ ಇದನ್ನು ಮತ್ತಷ್ಟು ಕೆದಕುವ ಬದಲು ಈ ಸಂದರ್ಭದಲ್ಲಿ ಮೌನವಾಗಿದ್ದು ಪರಿಸ್ಥಿತಿ ತಿಳಿಗೊಳಿಸುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net