

ರಾಯಚೂರು: ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸ ಮಾಡಿದ್ದು, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಂಘ ಕಟ್ಟಿಕೊಳ್ಳಲು ನಿರ್ಬಂಧ ಹೇರಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ ಹೇಳಿದರು.
ಸ್ಥಳೀಯ ಸಿಐಟಿಯು ಕಾರ್ಯಾಲಯದ ಮುಂದೆ ಕಾರ್ಮಿಕ ದಿನಾಚರಣೆ ನಿಮಿತ್ತ ಬುಧವಾರ ಪಕ್ಷದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮೋದಿ ಸರ್ಕಾರ ಧರ್ಮಾಧರಿತವಾಗಿ ಜನರ ಐಕ್ಯತೆಯನ್ನು ಮುರಿಯುತ್ತಿದೆ ಎಂದರು.
ದೇಶದ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ದೇಶದ ಸಾರ್ವಭೌಮತೆಯನ್ನು ಹಾಳುಗೆಡವಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋ ನೀತಿಗಳನ್ನು ಹಿಮ್ಮೆಟ್ಟಿಸಲು ಕಾರ್ಮಿಕರು ಮುಂದಾಗಬೇಕು ಎಂದು ಹೇಳಿದರು.
ಮುಖಂಡರಾದ ಎಂ.ಶರಣಗೌಡ, ಪ್ರವೀಣರೆಡ್ಡಿ ಗುಂಜಳ್ಳಿ, ಕೆ.ಜಿ.ವೀರೇಶ ಮಾತನಾಡಿದರು. ನಂತರ ಸಿಐಟಿಯು ಕಾರ್ಯಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋ ನೀತಿಗಳ ವಿರುದ್ಧ ಘೋಷಣೆ ಕೂಗಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ಪದಾಕಾರಿಗಳಾದ ವರಲಕ್ಷ್ಮಿ, ಚನ್ನಾರೆಡ್ಡಿ, ಶರಣಪ್ಪ, ಗೋಕುರಮ್ಮ, ಇಂದಿರಮ್ಮ, ಜಂಬಣ್ಣ, ಮಲ್ಲಿಕಾರ್ಜುನ, ಜಿಲಾನಿ ಪಾಷಾ, ಗಂಗಮ್ಮ, ನಾಗೇಂದ್ರ, ಮಲ್ಲೆಶ, ಗೋವಿಂದದಾಸ ಉಪಸ್ತಿತರಿದ್ದರು.