

ಕೊಪ್ಪ: ಹುಚ್ಚುರಾಯರ ಕೆರೆ ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ವಿರೋಧಿಸಿ ಬಂದ್ ಮಾಡಿದರೇ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಳ್ಳುಗಳನ್ನು ಹರಡುವ ಮೂಲಕ ಜನತೆಯಲ್ಲಿ ಗೊಂದಲ ಸೃಷ್ಟಿಸುವ ವಿಲ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಆರೋಪಿಸಿದರು.
ಲೇಔಟ್‌ನಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ತೊಂದರೆಗಳನ್ನು ಅರಿತು ಪಪಂ ಎದುರು ಪ್ರತಿಭಟೆ ನಡೆಸಿ, ಸಹಿ ಸಂಗ್ರಹಿಸಿ ಕೊಪ್ಪ ಪಟ್ಟಣದ ಜನತೆಯ ಬೆಂಬಲ ಪಡೆದು ಬಂದ್ ಕರೆ ಕೊಟ್ಟಾಗ ಜನತೆ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ತೆರೆಯದೆ ಬೆಂಬಲ ನೀಡಿದ್ದಾರೆ. ಇದು ಕಾಂಗ್ರೆಸ್‌ನ ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾಜಿ ಸೈನಿಕರಿಂದ ಯಾವುದೇ ಸೈಟ್ ಕಾನೂನು ಬಾಹಿರ ಪಡೆದಿಲ್ಲ, ನಾನು ಸೈಟ್ ಪೊಡೆಯುವ ಮುನ್ನ 2010ರಲ್ಲಿ ಕಾಂಗ್ರೆಸ್‌ನ ಪ್ರದಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್ ರವರು ಜಿಪಿಎ ಮತ್ತು ಆಗ್ರಿಮೆಂಟ್ ಮಾಡಿಕೊಂಡಿದ್ದರು ಎಂದರು.
ಮಾಜಿ ಸಚಿವ ಜೀವರಾಜ್ ಅವರು ದಲಿತರ ಜಮೀನು ಪಡೆದು ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೀವರಾಜ್ ಅವರ ದೊಡ್ಡಪ್ಪ 1959ರಲ್ಲಿ ಪಡೆದುಕೊಂಡ ಜಮೀನು ಖರೀದಿಸಿದ್ದಾರೆ. ಜಮೀನು ನೀಡದವರು ಕುಡವಿ ಸಮುದಾಯಕ್ಕೆ ಸೇರಿದವರು. ಅವರು ಬಿಸಿಎಂ (ಎ)ವರ್ಗಕ್ಕೆ ಬರುತ್ತಾರೆ. ಈ ಬಗ್ಗೆ ಅವರು ಸುಳ್ಳು ಎಸ್‌ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವರದಿ ನೀಡಿದ್ದಾರೆ. ಎನ್.ಆರ್.ಪುರ ತಹಸೀಲ್ದಾರ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ಎಚ್.ಆರ್.ಜಗದೀಶ್, ಪ್ರಧಾನ ಕಾರ್ಯದರ್ಶಿ ಬಿಷೇಜ್ ಭಟ್, ಅರುಣ್ ಶಿವಪುರ, ನಗರ ಘಟಕದ ಅಧ್ಯಕ್ಷ ದಿವಾಕರ್ ಭಟ್, ಪ್ರಮುಖರಾದ ರೇವಂತ್, ಶತನಿಕ್, ಶೃಂಗೇಶ್ವರ್, ಇಸ್ಮಾಯಿಲ್, ಜಯಂತ್ ನಿಲುವಾಗಿಲು ಇದ್ದರು.