ವಚನಗಳಿಂದ ಸವಾಜದ ಅಂಡು ಡೊಂಕು ತಿದ್ದುವ ಯತ್ನ

15
Published on

ಮೈಸೂರು: ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದು, ವಿಶ್ವ ವ್ಯಾಪಿಂಾಗಿದೆ. 12ನೇ ಶತವಾನದಲ್ಲಿ ಬಸವಣ್ಣ ಮತ್ತು ಅವರ ಸಂಗಡಿಗರು ವಚನ ಸಾಹಿತ್ಯದ ಮೂಲಕ ಸವಾಜದ ಅಂಡು ಡೊಂಕುಗಳನ್ನು ತಿದ್ದುವ ಪ್ರಂುತ್ನ ನಡೆಸಿದರು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಹೇಳಿದರು.
ನಗರದ ವಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಂುನ ಸಂಸ್ಥೆ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಂದೋಲನ’, ‘ದಿವಂಗತ ಎಚ್.ಎಂ.ಮಲ್ಲಿಕಾರ್ಜುನಪ್ಪ ಮತ್ತು ನಾಗರತ್ನಮ್ಮ’ ದತ್ತಿ ವಿಚಾರ ಸಂಕಿರಣ ಉದ್ಘಾಟಿಸಿ ವಾತನಾಡಿದ ಅವರು, ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ ಎಂದರು.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ವಾತನಾಡಿ, ನುಡಿದರೆ ಮುತ್ತಿನ ಹಾರದಂತೆ ಭಾಷೆ ಇರಬೇಕು, ಆದರೆ ಕನ್ನಡ ಭಾಷೆಂುನ್ನು ಅವವಾನಕರ ರೀತಿಂುಲ್ಲಿ ಬಳಸಲಾಗುತ್ತಿದೆ. ದೃಶ್ಯ ವಾಧ್ಯಮಗಳಲ್ಲಿ ಇದು ಹೆಚ್ಚಾಗಿದ್ದು, ಭಾಷೆಂುನ್ನು ಕುಲಗೆಡಿಸಲಾಗುತ್ತಿದೆ. ಶರಣ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ಮೂಲಕ ಜಗತ್ತಿಗೆ ಮಹತ್ವದ ಸಾರಿದರು ಎಂದರು.

ವಚನ ಸಾಹಿತ್ಯ ಮತ್ತು ಸಮೂಹ ಸಂವಹನ ವಿಷಯದ ಕುರಿತು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಪ್ರಾಧ್ಯಾಪಕಿ ಪ್ರೊ.ಎಚ್.ಎಸ್.ಅಂಬಿಕಾ ಮಾತನಾಡಿ, ಪ್ರಸ್ತುತ ಅನಕ್ಷಸ್ಥರಿಂದ ಸಮಾಜ ಹಾಳಾಗುತ್ತಿಲ್ಲ. ವಿದ್ಯಾವಂತರೇ ಇಂದು ಸಮಾಜವನ್ನು ಒಡೆದಾಳುವ, ಜಾತೀಯತೆ ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜಾತಿ ಪದ್ಧತಿ ಉತ್ತುಂಗದಲ್ಲಿ ಇದ್ದ 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಮಾನವೀಯ ಪ್ರಜ್ಞೆ ಹುಟ್ಟಿ ಹಾಕಿದರು. ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ತೋರಿದರು ಎಂದರು.
ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ‘ವಚನ-ಭಾಷೆ ಮತ್ತು ಸಂಸ್ಕ ೃತಿ’ ವಿಷಯದ ಕುರಿತು ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ವಿಭಾಗದ ಮುಖ್ಯಸ್ಥೆ ಡಾ.ಎಂ.ಎಸ್.ಸಪ್ನಾ, ಅಧ್ಯಂುನ ಸಂಸ್ಥೆಯ ನಿರ್ದೇಶಕಿ ಡಾ.ವಿಜಂುಕುವಾರಿ ಎಸ್.ಕರಿಕಲ್, ಪತ್ರಕರ್ತೆ ರಶ್ಮಿ ಕೋಟಿ, ಅಧ್ಯಾತ್ಮಿಕ ಚಿಂತಕ ಶಂಕರ ದೇವನೂರು, ನಿವೃತ್ತ ಪ್ರಾಧ್ಯಾಪಕ ಕೆ.ಸಿ.ಬಸವರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net