ಶಾರದೆ ನೆಲದಲ್ಲಿ ಸೃಷ್ಟಿಸಬೇಕು ಕಲಾ ಜಗತ್ತು

SRI smam
ಶೃಂಗೇರಿಯಲ್ಲಿ ಆಯೋಜಿಸಿದ್ದ ಹೊಸ್ಕೆರೆ ಸಂಭ್ರಮ ಕಾರ್ಯಕ್ರಮದಲ್ಲಿ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿದರು. ಟಿ.ಕೆ.ಪರಾಶರ, ಮಾನಗಾರು ತ್ಯಾಗರಾಜ್, ರಾಘವೇಂದ್ರ ಇದ್ದರು.
Published on

ಶೃಂಗೇರಿ: ಶಾರದೆ ನೆಲದಲ್ಲಿ ಕಲಾ ಜಗತ್ತು ಸೃಷ್ಟಿಸಬೇಕಿದೆ. ಸೃಜನಶೀಲ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.

ಆದಿಚುಂಚನಗಿರಿ ಸಮುದಾಯಭವನದಲ್ಲಿ ಶನಿವಾರ ಏರ್ಪಡಿಸಿದ್ದ ಹೊಸ್ಕೆರೆ ಸಂಭ್ರಮದಲ್ಲಿ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಲೇಖಕರ ಸಂಖ್ಯೆ ಕ್ಷೀಣಿಸುತ್ತಿದೆ. ಜತೆಗೆ ಓದುವವರ ಸಂಖ್ಯೆಯೂ ಕಡಿಮೆಯಾಗುತ್ತಿರುವುದು ಅಪಾಯಕಾರಿ. ಲೇಖನ ಬರೆಯಲು ತಾಳ್ಮೆ, ವಿಷಯದ ಮೇಲೆ ಜ್ಞಾನ ಹೊಂದಿರಬೇಕು. ಲೇಖನ ಬರವಣಿಗೆ ನಂತರವೂ ಅದನ್ನು ಪುಸ್ತಕ ರೂಪದಲ್ಲಿ ಹೊರತರಲು ಲೇಖಕ ಹೋರಾಟ ಮಾಡಬೇಕಿದೆ. ಹೊಸ್ಕೆರೆ ವೆಂಕಟೇಶ್ ಕಾದಂಬರಿ ರಚಿಸಿ, ನಂದನವನ ಕಾದಂಬರಿ ಚಲನಚಿತ್ರ ರೂಪುಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹೊಸ್ಕೆರೆ ವೆಂಕಟೇಶ್ ಕಾದಂಬರಿ ಆಧಾರಿತ ನಂದನವನ, ಯಕ್ಷಗಾನ ಶ್ರೀ ವರದೇವಾರಾಹಿ, ಸುವರ್ಣ ಭೂಮಿಕೆ ಮತ್ತು ಭಕ್ತಿ ಪಾರಮ್ಯ ಶೀರ್ಷಿಕೆಗಳನ್ನು ಅನಾವರಣ ಮಾಡಲಾಯಿತು.
ಮ್ಯಾಮ್ಕೋಸ್ ನಿರ್ದೇಶಕ ಟಿ.ಕೆ.ಪರಾಶರ, ಕೃಷಿಕ ಮಾನಗಾರು ತ್ಯಾಗರಾಜ್, ಚಲನಚಿತ್ರ ನಿರ್ದೇಶಕ ರಾಘವೇಂದ್ರ, ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ, ಹೊಸ್ಕೆರೆ ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net