ಕಲಾ ಪ್ರಕಾರಗಳಲ್ಲಿ ಶ್ರೀಮಂತ ಕಲೆ ಬಯಲಾಟ

Bankapur news
Published on

ಬಂಕಾಪುರ: ಜಾನಪದ ಕಲಾ ಪ್ರಕಾರಗಳಲ್ಲಿ ಅತ್ಯಂತ ಆಕರ್ಷಕವಾದದ್ದು ಬಯಲಾಟ. ಕನ್ನಡ ನಾಡಿನಲ್ಲಿ ಈ ಬಯಲಾಟ ಪರಂಪರೆ ಬಹಳ ಪ್ರಾಚೀನ ಮತ್ತು ಶ್ರೀಮಂತ ಕಲೆಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಶೈಲ ಹುದ್ದಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜ್‌ನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ವಿಭಾಗ, ಕನ್ನಡ ನುಡಿ ವೇದಿಕೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಯಲಾಟ ಪರಂಪರೆಯನ್ನು ಉಳಿಸಿ-ಬೆಳೆಸಿಕೊಂಡು ಬಂದವರು ನಮ್ಮ ಗ್ರಾಮೀಣ ಕಲಾವಿದರು. ಆಧುನಿಕತೆ ಮತ್ತು ಜಾಗತೀಕರಣ ಪ್ರಭಾವದಿಂದ ಹಿನ್ನಡೆಯುಂಟಾಗುತ್ತಿರುವ ಬಯಲಾಟ ಪರಂಪರೆಯನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ವಿದ್ವಾಂಸರುಗಳಲ್ಲಿ ನಾನೂ ಒಬ್ಬ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸುಭಾಷ ರಾಜಮಾನೆ ಮಾತನಾಡಿದರು. ಪ್ರಾಚಾರ್ಯ ಡಾ. ಚಂದ್ರಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಉಮೇಶ ಕರ್ಜಗಿ, ಡಾ. ಸಂದೀಪಗೌಡ ಪಾಟೀಲ, ಎಂ. ಓಂಕಾರೆಪ್ಪ, ಪ್ರೊ. ಶಂಭುಲಿಂಗಪ್ಪ ದೇವಸೂರ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ವಪ್ನಾ ಗೊಡ್ಡೆಮ್ಮಿ ಅತಿಥಿ ಪರಿಚಯ ಮಾಡಿದರು. ಡಾ. ಉಮೇಶ ಕರ್ಜಗಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net