

ಬೂದಿಕೋಟೆ: ಇತಿಹಾಸ ಪ್ರಸಿದ್ಧ ಚಿಕ್ಕಕಳವಂಚಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದುರಾಗಿದ್ದು, ಆವರಣದಲ್ಲಿನ ಬೆಲೆ ಬಾಳುವ ನೂರಾರು ಮರಗಳನ್ನು ಏಕಾಏಕಿ ಕಡೆದು ಹಾಕಿದ್ದಾರೆ.
ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿ ಆಂಜನೇಯಸ್ವಾಮಿ ದೇವಾಲಯವು ಧಾರ್ಮಿಕ ದತ್ತಿ ಇಲಾಖೆ ಸೇರಿದೆ. ಆದರೆ ದೇವಾಲಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಇಲಾಖೆ ಅಧಿಕಾರಿಗಳು ಈ ದೇವಾಲಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಆಂಜನೇಯಸ್ವಾಮಿ ದೇವಾಲಯವು ಚಿಕ್ಕಕಳವಂಚಿ ಗ್ರಾಮದ ಸರ್ವೆ ನಂ.116 ರಲ್ಲಿದ್ದು, ಸುವಾರು 5 ಎಕರೆ ವಿಸ್ತೀರ್ಣದಲ್ಲಿ ದೇವಾಲಯದ ಆವರಣಕ್ಕೆ ಫೆನ್ಸಿಂಗ್ ಹಾಕಲಾಗಿದೆ. ಹಲವು ವರ್ಷಗಳ ಹಿಂದೆ ವಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದಿ. ಮುನಿರಾಜು ಸರ್ಕಾರದ ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಆವರಣದಲ್ಲಿ ರೈತ ಸಮುದಾಯ ಭವನ, ಸಿಸಿ ರಸ್ತೆ, ಬಯಲು ರಂಗಮಂದಿರ ಮತ್ತು ಸಮುದಾಯದ ಶೌಚಗೃಹ ನಿರ್ಮಿಸಿದ್ದಾರೆ. ಇದರೊಟ್ಟಿಗೆ ಮೀನುಗಾರಿಕೆ ಇಲಾಖೆಯಿಂದ ಭವನ ನಿರ್ಮಿಸಿ ಕೊಳವೆ ಬಾವಿ ಕೊರೆಸಿದ್ದಾರೆ. ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಸಸ್ಯಗಳನ್ನು ನಾಟಿ ವಾಡಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ದೇವಾಲಯ ಎತ್ತರದ ಬೆಟ್ಟದಲ್ಲಿರುವ ಕಾರಣ ಬೆಟ್ಟಕ್ಕೆ ಡಾಂಬರೀಕರಣದ ರಸ್ತೆ ಸಹ ವಾಡಲಾಗಿತ್ತು. ಆದರೆ ಈಗ ದೇವಾಲಯದಲ್ಲಿ ಅಭಿವೃದ್ಧಿ ಕೊರತೆಯಿಂದ ಮೂಲ ಸೌಕರ್ಯಗಳು ಮರೀಚಿಕೆಯಾಗಿದೆ.
ಈ ದೇವಾಲಯವು ಆಂದ್ರ, ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದಲ್ಲಿರುವ ಕಾರಣ ವಾರಕ್ಕೆ ಒಮ್ಮೆ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಗಡಿ ಗ್ರಾಮದ ಜನರು ಇದೇ ದೇವಾಲಯದಲ್ಲಿ ಮದುವೆ ಸೇರಿ ಹಲವು ಶುಭ ಸವಾರಂಭಗಳನ್ನು ವಾಡುವುದು ಸಾವಾನ್ಯ. ಆದರೆ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ, ಸೂಕ್ತ ನಿರ್ವಹಣೆ ಇಲ್ಲದೇ ದೇವಾಲಯ ಕಸದಿಂದ ತುಂಬಿದೆ. ದೇವಾಲಯದ ಪ್ರಾಂಗಣದಲ್ಲಿ ಸ್ವಚ್ಚ ವಾಡುವವರು ಇಲ್ಲದೇ ಸಮುದಾಯದ ಶೌಚಗೃಹದಲ್ಲಿ ನೀರಿಲ್ಲದೇ ಸುತ್ತಲೂ ಗಿಡ-ಗಂಟಿಗಳು ಬೆಳೆದಿದ್ದು, ವಿಷ ಜೀವಿಗಳ ಆವಾಸ ಸ್ಥಾನವಾಗಿದೆ.
ದೇವಾಲಯದ ಆವರಣದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಿದ್ದು, ಪ್ರಭಾವಿ ವ್ಯಕ್ತಿಗಳು ಏಕಾಏಕಿ ಮರಗಳನ್ನು ಕಡಿದು ಹಾಕಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ವಾಡಿ ಅಭಿವೃದ್ಧಿಗೆ ಮುಂದಾಗದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದೇವಾಯದ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕು ಎಂಬುದು ಸುತ್ತ ಮುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದೆ.
ಪುರಾತನ ಆಂಜನೇಯಸ್ವಾಮಿ ದೇವಾಲಯ ಅಭಿವೃದ್ಧಿಗೆ ಮುಜರಾಯಿ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಅದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ವಾಡಬೇಕಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಆದರೆ ಯಾರೂ ಸಹ ದೇವಾಲಯ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ. ಈಗ ದೇವಾಲಯದಲ್ಲಿರುವ ಮರಗಳನ್ನು ಕಟಾವು ವಾಡಿದ್ದು, ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. | ಮುನೀರಪ್ಪ ಚಿಕ್ಕಕಳವಂಚಿ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿರುವುದರಿಂದ ಪಂಚಾಯಿತಿಯಿಂದ ಹೆಚ್ಚಿನ ಅಭಿವೃದ್ಧಿ ವಾಡಲು ಸಮಸ್ಯೆ ಎದುರಾಗಿದೆ. ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಮನವಿ ವಾಡಲಾಗುತ್ತದೆ. ಪಂಚಾಯಿತಿ ವ್ಯಾಪ್ತಿಗೆ ದೇವಾಲಯ ಹಸ್ತಾಂತರಿಸಿದರೆ ಮೂಲ ಸೌಕರ್ಯಗಳ ಜತೆಗೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. | ಪ್ರಭಾಕರರೆಡ್ಡಿ ಗ್ರಾ.ಪಂ ಅಧ್ಯಕ್ಷ