ಮನನೊಂದು ಮದ್ಯವ್ಯಸನಿ ಆತ್ಮಹತ್ಯೆ

Oplus_16908288
ಮೃತ ಸುಬ್ರಮಣಿ.
Published on

ವಿರಾಜಪೇಟೆ: ಕುಟುಂಬವರು ಹೇಳಿದ ಬುದ್ಧಿವಾದದಿಂದ ಮನನೊಂದು ವ್ಯಕ್ತಿ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಟ್ಟಣದ ಅಯ್ಯಪ್ಪ ಬೆಟ್ಟದ ನಿವಾಸಿ ಪಿ.ರಾಮು ಅವರ ಪುತ್ರ ಆಟೋಚಾಲಕ ಪಿ.ಆರ್.ಸುಬ್ರಮಣಿ(41) ಆತ್ಮಹತ್ಯೆ ಮಾಡಿಕೊಂಡವರು.

ಸುಬ್ರಮಣಿ 20 ವರ್ಷಗಳಿಂದ ನಗರದಲ್ಲಿ ಆಟೋ ಚಾಲಕನಾಗಿದ್ದು, ಮದುವೆಯಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸುಬ್ರಮಣಿಗೆ ಕುಡಿತದ ಚಟವಿತ್ತು. ಹಲವು ದಿನಗಳಿಂದ ಪತ್ನಿ ಹಾಗೂ ಕುಟುಂಬವರು ಕುಡಿತ ಬಿಡುವಂತೆ ಬುದ್ಧಿವಾದ ಹೇಳುತ್ತಿದ್ದರು. ಭಾನುವಾರ ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಆಟೋ ಚಲಾಯಿಸಿಕೊಂಡು ಕೆಲಸಕ್ಕೆ ಹೋದವರು ರಾತ್ರಿಯಾದರೂ ಮರಳಿಲ್ಲ. ಮನೆಯವರು ಹುಡುಕಾಟ ನಡೆಸಿದ್ದರು. ಸೋಮವಾರ ಬೆಳಗ್ಗೆ ವೇಳೆಗೆ ಮನೆಯ ಸಮೀಪದ ತೋಟವೊಂದರಲ್ಲಿ ಮರದ ಕೊಂಬೆಗೆ ಎಲೆಕ್ಟ್ರಿಕ್ ವಯರ್‌ನಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ. ಮೃತನ ಪತ್ನಿ ಸರೋಜಾ ಅವರ ದೂರಿನ ಮೇರೆಗೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net