ಆನೇಕಲ್‌ನಲ್ಲಿ ಜಡ್ಡುಗಟ್ಟಿದ ಆಡಳಿತ ಯಂತ್ರ

ಆನೇಕಲ್ ತಾಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥರೆಡ್ಡಿ, ಹೆಬ್ಬಗೋಡಿ ನಗರಸಭೆ ಅಧ್ಯಕ್ಷೆ ಪ್ರಮೀಳಾ ರಾಮಚಂದ್ರ, ಉಪಾಧ್ಯಕ್ಷೆ ಸುಜಾತ ಕೆ.ಪಿ.ರಾಜು, ಪೌರಾಯುಕ್ತ ಕೆ.ನರಸಿಂಹಮೂರ್ತಿ ಇದ್ದರು.
ಆನೇಕಲ್ ತಾಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥರೆಡ್ಡಿ, ಹೆಬ್ಬಗೋಡಿ ನಗರಸಭೆ ಅಧ್ಯಕ್ಷೆ ಪ್ರಮೀಳಾ ರಾಮಚಂದ್ರ, ಉಪಾಧ್ಯಕ್ಷೆ ಸುಜಾತ ಕೆ.ಪಿ.ರಾಜು, ಪೌರಾಯುಕ್ತ ಕೆ.ನರಸಿಂಹಮೂರ್ತಿ ಇದ್ದರು.
Published on

ಶಾಸಕ ಬಿ.ಶಿವಣ್ಣ ಹೇಳಿಕೆ-ಜನರಿಗೆ ತೊಂದರೆ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ

ಆನೇಕಲ್: ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.

ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಹಾಗೂ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆದವರು ಸಮಾಜಕ್ಕೆ ಕೊಡುಗೆ ನೀಡುವ ಗುಣ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡಿದೆ. ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.

ಆನೇಕಲ್‌ನಲ್ಲಿ ಆಡಳಿತ ಯಂತ್ರ ಜಡ್ಡುಗಟ್ಟಿದೆ. ಹಾಗಾಗಿ ನಗರೋತ್ಥಾನ ಯೋಜನೆಯಡಿ ಕಾವೇರಿ ನೀರನ್ನು ಆನೇಕಲ್‌ಗೆ ತರಲಾಯಿತು. 2017ರಲ್ಲಿ ಕಾವೇರಿ ನೀರಿನ ಸರಬರಾಜು ಸಂಬಂಧ ಸಂಪ್ ಟ್ಯಾಂಕ್ ಮತ್ತು ಪೈಪ್‌ಲೈನ್‌ಗಾಗಿ 11.5ಕೋಟಿ ರೂಪಾಯಿ ಮೀಸಲಾಗಿತ್ತು. ಆದರೆ, ಐದಾರು ವರ್ಷಗಳು ಕಳೆದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅಧಿಕಾರಿಗಳಿಗೆ ಮನಸಾಕ್ಷಿ ಅತ್ಯಂತ ಮುಖ್ಯ. ಜನರ ತೆರಿಗೆ ಹಣದಿಂದಾಗಿ ಅಧಿಕಾರಿಗಳಿಗೆ ಸಂಬಳ ಬರುತ್ತದೆ. ಹಾಗಾಗಿ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡಲು ಆದ್ಯತೆ ನೀಡಬೇಕು. ಜನರ ಕೆಲಸ ಕಾರ್ಯಗಳಿಗೆ ತೊಡಕು ಮಾಡುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದರು.

ವಿವಿಧ ಸೌಲಭ್ಯ ವಿತರಣೆ

ಕಾರ್ಯಕ್ರಮದಲ್ಲಿ 88 ಮಂದಿ ವಿದ್ಯಾರ್ಥಿಗಳಿಗೆ ಶೈಕ್ಷಣಕ ಪ್ರೋತ್ಸಾಹಧನ, ಇಬ್ಬರಿಗೆ ಶಸ್ತ್ರಚಿಕಿತ್ಸಾ ಸಹಾಯಧನ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ 8 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, 19 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರ, 22 ಮಂದಿಗೆ ಸೋಲಾರ್ ಹೋಮ ಲೈಟ್ ಕಿಟ್‌ನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದವರಿಗೆ 24.10ಶೇ. ಅನುದಾನದಡಿಯಲ್ಲಿ ವಿತರಿಸಲಾಯಿತು. ಶೇ.7.25 ಯೋಜನೆಯಡಿ ಹಿಂದುಳಿದ ವರ್ಗಗಳಿಗೆ 147 ಮಂದಿಗೆ ವಿದ್ಯಾಭ್ಯಾಸ ಪ್ರೋತ್ಸಾಹಧನ, 3 ಮಂದಿಗೆ ಶಸ್ತ್ರಚಿಕಿತ್ಸಾ ಸಹಾಯಧನ, ಒಬ್ಬರಿಗೆ ಕ್ರೀಡಾ ಪ್ರೋತ್ಸಾಹಧನ ವಿತರಿಸಲಾಯಿತು. ಶೇ.5ರ ಯೋಜನೆಯಡಿ 11 ಮಂದಿಗೆ ವಿಶೇಷ ಚೇತನರಿಗೆ ವಿಶೇಷ ಚೇತನ ಪಾಲನೆ ಪೋಷಣಾ ಭತ್ಯೆ, ತಲಾ ಒಬ್ಬರಿಗೆ ವಿದ್ಯಾಭ್ಯಾಸ ಮತ್ತು ಕ್ರೀಡಾ ಪೋತ್ಸಾಹಧನ ವಿತರಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net