ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳ ತಂದೆಯ ಮೊದಲ ಪ್ರತಿಕ್ರಿಯೆ ಹೀಗಿತ್ತು ನೋಡಿ..

Waji Amulya leon's father 20 FEB 20
Published on

ಬೆಂಗಳೂರು: ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದ ಯುವತಿ ಅಮೂಲ್ಯ ಲಿಯೋನಾ ಕೊಪ್ಪ ಮೂಲದವಳು ಎಂಬುದು ಈಗ ಜಗಜ್ಜಾಹೀರು.

ಪ್ರತಿಭಟನಾ ವೇದಿಕೆ ಮೇಲಿದ್ದ ಮುಖಂಡರು ಅನಿರೀಕ್ಷಿತ ಬೆಳವಣಿಗೆಯಿಂದ ಬೆಚ್ಚಿಬಿದ್ದಿದ್ದಾರೆ. ಎಲ್ಲರೂ ಆ ಯುವತಿಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆಕೆಯ ಅಪ್ಪ ಅಮ್ಮ ಇರುವ ಮನೆ ಸಮೀಪಕ್ಕೆ ಅನೇಕರು ಧಾವಿಸಿದ್ದಾರೆ. ಅಲ್ಲಿ ಮಾಧ್ಯಮಗಳಿಗೆ ಆಕೆಯ ತಂದೆ ವಾಜಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಅವರಲ್ಲೂ ಆತಂಕ ಮನೆ ಮಾಡಿದೆ.

ಕಳೆದ ಐದು ದಿನಗಳಿಂದ ಆಕೆ ಸಂಪರ್ಕದಲ್ಲಿ ಇಲ್ಲ. ಮಗಳಿಗೆ ಸಾಕಷ್ಟು ಬುದ್ಧಿವಾದ ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಈಗ ಐದು ದಿನಗಳ ಹಿಂದೆ ಆಕೆಗೆ ಕರೆ ಮಾಡಿದ್ದೆ, ನನ್ನ ಆರೋಗ್ಯ ಸರಿ ಇಲ್ಲ, ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದಿದ್ದೆ. ಆದರೆ, ನಿನ್ನ ಆರೋಗ್ಯದ ಕಡೆಗೆ ನೀನೇ ಗಮನಕೊಡು ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಳು. ಅಲ್ಲಿಂದೀಚೆಗೆ ಆಕೆಯನ್ನು ನಾನೂ ಸಂಪರ್ಕಿಸಿಲ್ಲ ಎಂದು ವಾಜಿ ಹೇಳಿಕೊಂಡಿದ್ದಾರೆ. ಅವರ ಪೂರ್ಣ ಮಾತುಗಳಿಗೆ ದಿಗ್ವಿಜಯ ನ್ಯೂಸ್​ನ ಈ ವಿಡಿಯೋ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net