ಅಮೃತೇಶ್ವರಿ ಮೇಳ ಕೊನೇ ಸೇವೆಯಾಟ

yaksha new
Published on

ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ದಶಾವತಾರ ಯಕ್ಷಗಾನ ಮೇಳದ ತಿರುಗಾಟದ ಕೊನೆಯ ದೇವರ ಸೇವೆ ದೇವಳದಲ್ಲಿ ಶುಕ್ರವಾರ ಸಂಪನ್ನಗೊಂಡಿತು.

ದೇವಳದಲ್ಲಿ ಬಾಲಗೋಪಾಲ ವೇಷಧಾರಿ ಹಾಗೂ ಸ್ತ್ರೀ ವೇಷಧಾರಿ ಗೆಜ್ಜೆ ಕಟ್ಟಿ ನರ್ತಿಸುವ ಮೂಲಕ ವಾರ್ಷಿಕ ತಿರುಗಾಟ ಸಮಾಪ್ತಿಗೊಳಿಸಲಾಯಿತು. ಕಳೆದ ವರ್ಷ ಹಾಗೂ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಯಕ್ಷಗಾನ ತಿರುಗಾಟಕ್ಕೆ ಅರ್ಧದಲ್ಲಿಯೇ ಬ್ರೇಕ್ ಹಾಕಲಾಗಿದೆ.
ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ ಸಿ ಕುಂದರ್, ಸದಸ್ಯರಾದ ಸುಶೀಲಾ ಸೋಮಶೇಖರ್, ಚಂದ್ರ ಪೂಜಾರಿ, ಸುಬ್ರಾಯ ಆಚಾರ್ಯ, ರಾಮದೇವ ಐತಾಳ್, ಸತೀಶ್ ಹೆಗ್ಡೆ, ಸುಂದರ ಕೆ., ಜ್ಯೋತಿ ಬಿ. ಶೆಟ್ಟಿ, ಅರ್ಚಕ ಪ್ರತಿನಿಧಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ದೇವಳದ ಸಿಬ್ಬಂದಿ ಗಣೇಶ್ ಹೊಳ್ಳ, ಮೇಳದ ಯಜಮಾನ ಕೋಟ ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net