ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ತಪಸಣಾ ಶಿಬಿರ

mng-19aug-saahitya
Published on



ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ವತಿಯಿಂದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಸಂಕೀರ್ಣದಲ್ಲಿ ಸಂಸ್ಥೆಯ ಚಾಲಕರಿಗೆ, ನಿರ್ವಾಹಕರಿಗೆ ಮತ್ತು ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರಗಿತು.
ಶಿಬಿರ ಉದ್ಘಾಟಿಸಿದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾತನಾಡಿ ‘ ರೋಟರಿ ಸಂಸ್ಥೆಯ ಆರೋಗ್ಯ ಸಿರಿ ಯೋಜನೆ ಹಾಗೂ ಸಂಸ್ಥೆಯ ಸಮಾಜ ಸೇವಾ ಅಭಿಯಾನದ ಅಂಗವಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.
ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಡಾ.ದೇವದಾಸ್ ರೈ, ಸಹಾಯಕ ಗವರ್ನರ್ ರಾಜ್‌ಗೋಪಾಲ್ ರೈ, ವಲಯ ಅಧಿಕಾರಿ ಸಾಯಿ ಬಾಬಾ ರಾವ್ , ಕಾರ್ಯದರ್ಶಿ ರವಿ ಜಲನ್ , ರಾಜ್ಯ ರಸ್ತೆ ಸಾರಿಗೆ ಮಂಗಳೂರು ವಿಭಾಗದ ವಿಭಾಗೀಯ ಸಂಚಾಲಕ
ಕಮಲ್ ಕುಮಾರ್, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಿಯಾ ಪವನ್ ಕುಮಾರ್, ಕೆ.ಎಂ.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಬಟ್ ಪಿರೇರಾ ಉಪಸ್ಥಿತರಿದ್ದರು.
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ನೇತ್ರ ತಜ್ಞರಾದ ಡಾ.ಗುರುದತ್ತ್ ಕಾಮತ್ ನೇತೃತ್ವದಲ್ಲಿ ಆಸ್ಪತ್ರೆಯ ವೈದ್ಯರು ಆರೋಗ್ಯ ತಪಾಸಣೆ, ಮಧುಮೇಹ ಪರೀಕ್ಷೆ, ನೇತ್ರ ಪರೀಕ್ಷೆ ಮತ್ತು ದಂತ ಪರೀಕ್ಷೆಯನ್ನು ನೆರವೇರಿಸಿ ಉಚಿತ ಔಷಧ ಮತ್ತು ಕನ್ನಡಕ ವಿತರಿಸಿದರು. 300
ಮಂದಿ ಶಿಬಿರದ ಪ್ರಯೋಜನ ಪಡೆದರು. ಭಾಸ್ಕರ್ ರೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net