ಎಸ್ಎಸ್ಎಲ್ ಸಿ ಮಕ್ಕಳಿಗಾಗಿ ಅಧ್ಯಯನ ಆ್ಯಪ್, ಧಾರವಾಡದ ಅಮೃತ್ ಅಕಾಡೆಮಿಯ ಪ್ರಯತ್ನ

IMG_20250717_113358_280-1.jpg
Published on

ಹುಬ್ಬಳ್ಳಿ: ಧಾರವಾಡದ ಅಮೃತ್ ಅಕಾಡೆಮಿ ವತಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಹಾಗೂ ಕ್ರ್ಯಾಕ್ಇಟ್ ಬ್ಯಾಂಕಿಂಗ್ ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇವುಗಳ ಲೋಕಾರ್ಪಣೆ ಕಾರ್ಯಕ್ರಮ ಜುಲೈ 19ರಂದು ಸಂಜೆ 5ಕ್ಕೆ ನಗರದ ಉಣಕಲ್ಲ ಬಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಸಂಯೋಜಕ ಶಿವರಾಜ ಬಡಿಗೇರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆನ್ ಲೈನ್ ಹಾಗೂ ಆಫ್ ಲೈನ್ ತರಬೇತಿಯ ಕೊರತೆ ಇದೆ. ಕಳೆದ ಎರಡು ವರ್ಷದಿಂದ ಫಲಿತಾಂಶದಲ್ಲಿ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ 10ನೇ ತರಗತಿ ಮಕ್ಕಳ ಅನುಕೂಲಕ್ಕೆ ಆ್ಯಪ್ ರಚನೆ ಮಾಡಲಾಗಿದೆ. ಇದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ಕ್ರ್ಯಾಕ್ ಇಟ್ ಅಪ್ಲಿಕೇಶನ್ ಬಳಸಬಹುದು. ಧಾರವಾಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹ ಆ್ಯಪ್ ತರಲಾಗಿದೆ ಎಂದರು.

ಸ್ವರ್ಣ ಗ್ರೂಪ್ ಚೇರ್ಮನ್ ಡಾ. ವಿ.ಎಸ್.ವಿ. ಪ್ರಸಾದ ಅವರು ಅಮೃತ ಅಕಾಡೆಮಿ ಉದ್ಘಾಟನೆ ನೆರವೇರಿಸುವರು. ಕೆಎಲ್ ಇ ತಾಂತ್ರಿಕ ವಿವಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಎಂ.ಆರ್. ಪಾಟೀಲ ಅವರು ಕ್ರ್ಯಾಕ್ಇಟ್ ಉದ್ಘಾಟಿಸುವರು. ಇನ್ಸಪೆಕ್ಟರ್ ಮುರಗೇಶ ಚನ್ನಣ್ಣವರ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಯುನೈಟೆಡ್ ಸೆಕ್ಯೂರಿಟಿ ಫೋರ್ಸ್ ಸಂಸ್ಥಾಪಕ ಸಂತೋಷ ಇಂಚಲ್ ವಹಿಸುವರು.

ಧಾರವಾಡದ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿಯ ಪ್ರಾಧ್ಯಾಪಕ ಡಾ. ಪ್ರಶಾಂತ ಮಾಂಡ್ರೆ ಮಾತನಾಡಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೂ ಹೆಚ್ಚು ಸ್ಕೋರ್ ಮಾಡಬೇಕು, ಮುಖ್ಯವಾಗಿ ಧಾರವಾಡ ಜಿಲ್ಲೆಯ ಫಲಿತಾಂಶ ಉತ್ತಮವಾಗಬೇಕೆಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ. ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆ, ಉತ್ತರಗಳು ಮತ್ತು ರೆಕಾರ್ಡೆಡ್ ತರಗತಿಗಳು ಆ್ಯಪ್ ನಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ವಿಷಯವನ್ನು ಅಧ್ಯಯನ ಮಾಡಬಹುದಾಗಿದೆ ಎಂದರು.

ಸಂಸ್ಥೆಯ ನಿರ್ದೇಶಕ ಬಸವರಾಜ ಬಾಣಿ ಮಾತನಾಡಿ, ಧಾರವಾಡದಲ್ಲಿ ಕ್ರ್ಯಾಕ್ ಇಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದು, ಇಲ್ಲಿ ನಿವೃತ್ತ ಸೈನಿಕರ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಶೇ. 50ರಷ್ಟು ವಿನಾಯಿತಿ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಸಂತೋಷ ಹೊಂಗಲ್, ಸುರೇಶ ಮಾನ್ವಿ, ಮಂಜುನಾಥ ಕಲಾಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net