

ಬೆಂಗಳೂರು: ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತಯಾರಿಸಿರುವ 'ಅಮೃತ್ ನೋನಿ ಪೇನ್ ಆಯಿಲ್' ಇಂದು ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಇದನ್ನು ನಟ ಕಿಚ್ಚ ಸುದೀಪ್ ಇವತ್ತು ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಅನಾವರಣಗೊಳಿಸಿದರು.
ಆಯುರ್ವೇದ ದೇಶದ ಸಂಸ್ಕೃತಿಯ ಬೇರು. ಪ್ರಸಕ್ತ ಸನ್ನಿವೇಶದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಪ್ರತಿಯೊಬ್ಬರೂ ಇಂದು ಆಯುರ್ವೇದ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇಂತಹ ಸಮಯದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ತಂದುಕೊಡುವಲ್ಲಿ ವ್ಯಾಲ್ಯೂ ಪ್ರಾಡಕ್ಟ್ಸ್ನ ಅಮೃತ್‍ನೋನಿ ಉತ್ಪನ್ನಗಳು ಯಶಸ್ವಿಯಾಗಿವೆ ಎಂದು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಈ ಸಂಸ್ಥೆ ನೋನಿ ಹಣ್ಣು ಬೆಳೆಯುವ ಜತೆಗೆ ಆಧುನಿಕ ತಂತ್ರಜ್ಞಾನದಿಂದ ತಯಾರಿಸುತ್ತಿರುವ ಅಮೃತ್‍ನೋನಿ ಉತ್ಪನ್ನಗಳು ಲಕ್ಷಾಂತರ ಜನರ ಆರೋಗ್ಯ ಕಾಪಾಡುತ್ತಿವೆ. ಅಮೃತ್‍ನೋನಿಯು ದೇಶ-ವಿದೇಶದಲ್ಲಿ ಖ್ಯಾತಿ ಪಡೆದಿರುವುದು ನಮಗೆ ಹೆಮ್ಮೆ ಆಗುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಮಾರುಕಟ್ಟೆ ಒದಗಿಸಿರುವ ಓಂ ಶ್ರೀ ಎಂಟರ್ಪ್ರೈಸಸ್ ಶ್ರಮವೂ ಶ್ಲಾಘನೀಯ ಎಂದು ಸುದೀಪ್ ಹೇಳಿದರು.
ಈ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ತುಂಬಾ ಇಷ್ಟವಾಯಿತು. ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಶ್ರೀನಿವಾಸಮೂರ್ತಿ ಅವರು ಈ ಕಂಪನಿಯನ್ನು ಬೆಳೆಸಿದ್ದಾರೆ. ಈ ಬಗ್ಗೆ ನನ್ನ ತಂದೆ ನನಗೆ ಹೇಳಿದ್ದರು. ಸಂಸ್ಥೆ ಹೊರತಂದಿರುವ ಈ ಉತ್ಪನ್ನವು ದೇಶಾದ್ಯಂತ ಇನ್ನಷ್ಟು ಜನಪ್ರಿಯವಾಗಲಿ ಹಾಗೂ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಆಶಿಸುತ್ತೇನೆ. | ಕಿಚ್ಚ ಸುದೀಪ್ ನಟ
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನನಗೆ ಮರುಜನ್ಮ ನೀಡಿದ್ದು ನೋನಿ. ಅದೇ ಇವತ್ತು ಅಮೃತ್ ನೋನಿಯಾಗಿ ಲಕ್ಷಾಂತರ ಜನರ ಆರೋಗ್ಯವನ್ನು ಸುಧಾರಿಸುತ್ತಿದೆ ಎಂದು ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿ ಹೇಳಿದರು. ಪ್ರಾರಂಭದಿಂದ ಈವರೆಗೂ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡುತ್ತ ಬಂದಿದ್ದೇವೆ. ಆ ಗುಣಮಟ್ಟದಿಂದಾಗಿಯೇ ಇವತ್ತು ಜನರು ತಮ್ಮ ಹೃದಯದಲ್ಲಿ ಅಮೃತ್‍ನೋನಿಗೆ ಅತ್ಯುನ್ನತ ಸ್ಥಾನ ನೀಡಿದ್ದಾರೆ ಎಂದು ಶ್ರೀನಿವಾಸಮೂರ್ತಿ ಹೇಳಿದರು.
ಅಮೃತ್ ನೋನಿ ಡಿ-ಪ್ಲಸ್, ಅಮೃತ್‍ನೋನಿ ಆರ್ಥೊಪ್ಲಸ್, ಅಮೃತ್ ನೋನಿ ಪವರ್ ಪ್ಲಸ್ ಹಾಗೂ ಅಮೃತ್ ನೋನಿ ಸ್ತ್ರೀ ಸಂಜೀವಿನಿ ಉತ್ಪನ್ನಗಳು ಹತ್ತು ವರ್ಷಗಳಿಂದ ಲಕ್ಷಾಂತರ ಜನರ ಆರೋಗ್ಯಕ್ಕೆ ಕಾರಣವಾಗಿವೆ. ಇದೀಗ ಬಿಡುಗಡೆಯಾಗಿರುವ ಅಮೃತ್ ನೋನಿ ಪೇನ್ ಆಯಿಲ್ ಕೂಡ ಆಯುರ್ವೇದ ತಜ್ಞರ ಸಂಶೋಧನೆಯ ಒಂದು ಅತ್ಯುನ್ನತ ಉತ್ಪನ್ನವಾಗಿದೆ. ನೋವು ಹಾಗೂ ಉರಿಯೂತ ತೊಂದರೆ ಅನುಭವಿಸುತ್ತಿರುವವರಿಗೆ ಈ ಪೇನ್ ಆಯಿಲ್ ಪರಿಣಾಮಕಾರಿಯಾದ ಫಲಿತಾಂಶ ನೀಡಲಿದೆ ಎಂದರು.
ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈ.ಲಿ. ಕಂಪನಿ ಜತೆ ಕೈಜೋಡಿಸಿರುವ ಓಂ ಶ್ರೀ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕಿ ಮಂಗಳಾಂಬಿಕೆ ಮಾತನಾಡಿ, ಮೂರು ವರ್ಷಗಳಿಂದ ಅಮೃತ್ ನೋನಿ ಉತ್ಪನ್ನಗಳನ್ನು ನಮ್ಮ ಸಂಸ್ಥೆ ಮೂಲಕ ಗ್ರಾಹಕರಿಗೆ ನೀಡುತ್ತ ಬಂದಿದ್ದೇವೆ. ಅಮೃತ್‍ನೋನಿ ಉತ್ಪನ್ನಗಳಿಗೆ ಗ್ರಾಹಕರ ಅಭಿಪ್ರಾಯ ತುಂಬಾ ಚೆನ್ನಾಗಿದೆ. ಗ್ರಾಹಕರ ಆರೋಗ್ಯ ಸುಧಾರಣೆಗೆ ಅಗತ್ಯ ಸಲಹೆಗಳನ್ನು ನೀಡುತ್ತ ಬಂದಿದ್ದೇವೆ. ಜತೆಗೆ, ನುರಿತ ವೈದ್ಯರ ಮೂಲಕ ಉಚಿತ ಸಲಹೆ ಸಹ ನೀಡಲಾಗುತ್ತಿದೆ ಎಂದರು.
ವ್ಯಾಲ್ಯೂ ಪ್ರಾಡಕ್ಟ್ಸ್ ಹಾಗೂ ಓಂ ಶ್ರೀ ಎಂಟರ್ಪ್ರೈಸಸ್ ನೆಡೆದುಬಂದ ಹಾದಿಯ ಬಗ್ಗೆ ಕಿರುಚಿತ್ರ ಹಾಗೂ ಅಮೃತ್‍ನೋನಿ ಪೇನ್ ಆಯಿಲ್ ತಯಾರಿಕೆ ಹಾಗೂ ಅದರ ಉಪಯೋಗದ ಬಗ್ಗೆ ತಿಳುವಳಿಕೆ ನೀಡುವ ಚಿತ್ರವನ್ನು ಪ್ರದರ್ಶಿಸಲಾಯಿತು.