ನಗರಸಭೆಗೆ ಅಮೃತೇಶ್ ಉಪಾಧ್ಯಕ್ಷ

vp election
ಚಿಕ್ಕಮಗಳೂರು ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಂ.ಕೆ.ಪ್ರಾಣೇಶ್ ಅಭಿನಂದಿಸಿದರು. ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಬಸವರಾಜ್, ಸದಸ್ಯರು ಇದ್ದರು.
Published on

ಚಿಕ್ಕಮಗಳೂರು: ನಗರಸಭೆ ಉಪಾಧ್ಯಕ್ಷರಾಗಿ ಬಿಜೆಪಿ ಸದಸ್ಯ ಅಮೃತೇಶ್ ಚನ್ನಕೇಶವ ಅವಿರೋಧವಾಗಿ ಆಯ್ಕೆಯಾದರು.

ಉಮಾದೇವಿ ಕೃಷ್ಣಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಅಮೃತೇಶ್ ಚನ್ನಕೇಶವ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾಗಿ ಎಚ್.ಡಿ.ರಾಜೇಶ್ ಕಾರ್ಯನಿರ್ವಹಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಅಧ್ಯಕ್ಷರು, ಅಧಿಕಾರಿಗಳು, ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಕುಡಿಯುವ ನೀರು, ಒಳಚರಂಡಿ, ಮನೆ, ನಿವೇಶನ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರಸಭೆ ಆಯುಕ್ತ ಬಸವರಾಜ್, ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net