

ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದ್ದು, ನಗರ ಪ್ರದೇಶಕ್ಕೆ ಕೆಲಸಕ್ಕಾಗಿ ಬಂದ ಗ್ರಾಮೀಣ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿವುದನ್ನು ಗಮನಿಸಿದ ಮಹಾನಗರ ಪಾಲಿಕೆ ನಗರದಲ್ಲಿ ಶಾಶ್ವತವಾಗಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಲು ಮುಂದಾಗಿದ್ದು, ಅಮೃತ ನೆರಳು ಎನ್ನುವ ಯೋಜನೆ ಮೂಲಕ ಉಚಿತವಾಗಿ ಅರವಟ್ಟಿಗೆ ಮೂಲಕ ನೀರಿನ ವ್ಯವಸ್ತೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಬಿಸಿಲು ಹೆಚ್ಚು ಇರುವುದರಿಂದ ಕೆಲಸಕ್ಕಾಗಿ ಬಂದ ಗ್ರಾಮೀಣ ಜನರು,ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರು ಹಾಗೂ ನೆರಳಿಗೆ ಪರದಾಡುತ್ತಿರುತ್ತಾರೆ. ಜನರ ದಾಹ ಹೇಳತೀರದು. ಹೋಟೆಲ್‌ಗಳಲ್ಲಿ ತಿಂಡಿ, ಟೀ, ಕಾಫಿ ತೆಗೆದುಕೊಂಡರೆ ಮಾತ್ರ ನೀರು ಕೊಡುತ್ತಾರೆ. ಗ್ರಾಮೀಣ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮಹಾನಗರ ಪಾಲಿಕೆಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಶುದ್ದ ಹಾಗೂ ತಂಪಾದ ಕುಡಿಯುವ ನೀರನ್ನು ವರ್ಷ ೩೬೫ ದಿನ ನಿರಂತರವಾಗಿ ವಿತರಿಸುವ ಸಂಕಲ್ಪವನ್ನು ಮಾಲಿಕೆ ಮಾಡಿದೆ.
ಏನಿದು ಅಮೃತ ನೆರಳು?
ನಗರದಲ್ಲಿ ಮೊದಲ ಬಾರಿಗೆ ಪಾಲಿಕೆಯಿಂದ ಅಮೃತ ನೆರಳಿನ ಯೋಜನೆ ಮಾಡಿದ್ದು, ಈ ಹಿಂದೆ ಖಾಸಗಿ ಸಂಸ್ಥೆಗಳು ಹಾಗೂ ಸ್ವಯಂ ಸೇವ ಸಂಸ್ಥೆಗಳಿAದ ಬೇಸಿಗೆ ಸಂದರ್ಭದಲ್ಲಿ ಮಾತ್ರ ಜನ ಸಾಂದ್ರತೆ ಇರುವ ಪ್ರದೇಶದಲ್ಲಿ ೨ ರಿಂದ ೦೩ ತಿಂಗಳು ಮಾತ್ರ ಶುದ್ದ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಕೆ ಹಾಗೂ ಕೆಲವು ಕಡೆ ತಾತ್ಕಾಲಿಕ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಈ ಬಾರಿ ಶಾಶ್ವತ ಪರಿಹಾರ ನೀಡಬೇಕೆಂದು ನಗರದ ಎಪಿಎಂಸಿ ಮಾರುಕಟ್ಟೆ, ಗಂಜ್‌ವೃತ್ತ, ಜಿಲ್ಲಾಽಕಾರಿಗಳ ನಿಲಯ,ಆರ್‌ಟಿಓ ವೃತ್ತ,ರೈಲ್ವೆ ನಿಲ್ದಾಣ, ತೀನ್ ಕಂದೀಲ್, ಹತ್ತಿ ಮಾರುಕಟ್ಟೆ , ಎಂ.ಈರಣ್ಣ ವೃತ್ತ ಸೇರಿ ವಿವಿಧ ಪ್ರದೇಶದಲ್ಲಿ ಪಾಲಿಕೆಯಿಂದ ಟೆಂಡರ್ ಮೂಲಕ ಒಂದು ಬಿರುರಿನ ಮನೆಯ ರೀತಿಯಲ್ಲಿ ಕುಟೀರವನ್ನು (ಶೆಡ್)ನಿರ್ಮಾಣಕ್ಕೆ ೧.೮೦ ಲಕ್ಷ ರೂ ಅನುದಾನವನ್ನು ಮಂಜುರು ಮಾಡಲಾಗಿದ್ದು, ಈ ಶೆಡ್‌ನಲ್ಲಿ ೧೦ ರಿಂದ ೧೨ ಮರಳಿನ ರಾಶಿ ಮಾಡಿ ಆ ರಾಶಿಯ ಮೇಲೆ ೨೦ ರಿಂದ ೨೫ ಲೀ. ನೀರು ಸಂಗ್ರಹದ ಎರಡರಿಂದ ಮೂರು ಹೊಸ ಮಣ್ಣಿನ ಮಡಕೆಯನ್ನು ಇಟ್ಟಿz್ದÁರೆ. ಆ ಮಡಕೆಯಲ್ಲಿ ಪ್ರತಿ ದಿನ ನೂರಾರು ಲೀ. ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ನೀರನ್ನು ಬಿದಿರ ಕೊಳವೆಗೆ ಹೊಯ್ಯುತ್ತಾರೆ.
ಆ ಕೊಳವೆಯ ಮೂಲಕ ಹರಿದು ಬರುವ ತಂಪಾದ ನೀರನ್ನು ಬಾಯಾರಿ ಬಂದ ಜನರು ಹಿಡಿದು ಕುಡಿಯಲು ಮಣ್ಣಿನ ಲೋಟದ ವ್ಯವಸ್ಥೆಯನ್ನು ಮಾಡಿz್ದÁರೆ. ಈ ಅಮೃತ ನೆರಳು ಕೇವಲ ಬೇಸಿಗೆಗೆ ಮಾತ್ರವಲ್ಲದೆ ಮಳೆಗಾಲದಲ್ಲಿಯು ಬಳಕೆಯಾಗುವಂತೆ ಮಾಡಿದ್ದು, ನಿರ್ಮಾಣವಾದ ಶೆಡ್‌ನಲ್ಲಿ ಒಂದು ಕಡೆ ಕುಡಿಯುವ ನೀರಿನ ವ್ಯವಸ್ಥೆ ಇದ್ದರೆ ಮತ್ತೊಂಡು ಕಡೆ ಸಾರ್ವಜನಿಕರು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ನೀರು ವಿತರಣೆಗೆ ಸಿಬ್ಬಂದಿ ನೇಮಕ
ಈ ವಾರದಲ್ಲಿ ಪ್ರಾರಂಭವಾಗುವ ಅಮೃತ ನೆರಳು ಯೋಜನೆ ಪ್ರಾರಂಭಕ್ಕೆ ಒಂದು ಖಾಸಗಿ ಕಂಪನಿ ಜತೆಗೆ ಒಪ್ಪಂದವನ್ನು ಮಾಡಿಕೊಂಡು ಒಟ್ಟು ೮ ಜನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಈ ಬೇಸಿಗೆ ನಂತರ ನಿರ್ಮಾಣ ಮಾಡಿದ ಶೇಡ್‌ಗಳಲ್ಲಿ ತಲಾ ಒಂದು ಬೋರ್‌ವೆಲ್ ಹಾಕಿಸುವುದರ ಜತೆಗೆ ಸೋಲಾರ್ ಪ್ಲಾಂಟ್ ಹಾಗೂ ಶುದ್ದ ಕುಡಿಯುವ ಘಟಕವನ್ನು ಪ್ರಾರಂಭ ಮಾಡಿ ಉಚಿತವಾಗಿ ಸಾರ್ವಜನಿಕರಿಗೆ ಕುಡಿಯಲು ನೀರು ವಿತರಣೆಯಾಗುತ್ತದೆ.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾನದಲ್ಲಿ ಬಿಸಿಲು ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕಾಗಿ ಬಂದ ಗ್ರಾಮೀಣ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿರುತ್ತಾರೆ. ಆ ಜನರ ದಾಹ ಹೇಳತೀರದು. ಹೋಟೆಲ್‌ಗಳಲ್ಲಿ ತಿಂಡಿ, ಟೀ, ಕಾಫಿ ತೆಗೆದುಕೊಂಡರೆ ಮಾತ್ರ ನೀರು ಕೊಡುತ್ತಾರೆ. ಗ್ರಾಮೀಣ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮೊದಲ ಬಾರಿಗೆ ಅಮೃತ ನೆರಳು ಎನ್ನುವ ಯೋಜನೆ ಮೂಲಕ ಶಾಶ್ವತವಾಗಿ ಅರವಟ್ಟಿಗೆ ನೀರು ವಿತರಣೆ ಮಾಡಲು ಜನ ಸಾಂದ್ರತೆ ಇರುವ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಾನ ಮಾಡಲಾಗಿದೆ. ಒಂದು ವಾರದಲ್ಲಿ ಉದ್ಘಾಟನೆ ಮಾಡಲಾಗುವುದು.
ಜುಬಿನ್ ಮೊಹಪಾತ್ರ ಆಯುಕ್ತರು ಮಹಾನಗರ ಪಾಲಿಕೆ ರಾಯಚೂರು