ಅಮೃತಾ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

HYR AWORD (1)
Published on

ಹಿರಿಯೂರು: ರಾಷ್ಟ್ರಮಟ್ಟದ ಇನಸ್ಪೈರ್ ಆವಾರ್ಡ್‌ಗೆ ತಾಲೂಕಿನ ಹುಲುಗುಲಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅಮೃತಾ ಆಯ್ಕೆಯಾಗಿದ್ದಾಳೆ.

ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಇನಸ್ಪೈರ್ ಆವಾರ್ಡ್ ಸ್ಪರ್ಧೆಯಲ್ಲಿ ಪ್ರಸ್ತುತ ಭಾಗವಹಿಸಿದ್ದಾಳೆ. ಕೈಗಾರಿಕೆಗಳಿಂದ ಬಿಡುಗಡೆಯಾಗುವ ಬಣ್ಣದ ನೀರನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ಶುದ್ಧೀಕರಣ ಮಾಡಿ ಆ ನೀರನ್ನು ಮರುಬಳಕೆ ಮಾಡುವ ಸಾಧನ ತಯಾರಿಸಿದ್ದು, ಈ ಮಾದರಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net