ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಿಕ್ಷಣ ಸಂಸ್ಥೆಗೆ ಅಮೃತ ಮಹೋತ್ಸವ ಸಂಭ್ರಮ

4 LXR 1
Published on

ಲಕ್ಷ್ಮೇಶ್ವರ:  ಎಪ್ಪತೆôದು ವರ್ಷಗಳಿಂದ ಮಹಿಳೆಯರಿಂದಲೇ ನಿರ್ವಹಣೆಯಾಗಿ ಇಂದು ರಾಜ್ಯದ ಗಮನ ಸೆಳೆದ ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಿಕ್ಷಣ ಸಂಸ್ಥೆ ಇದೀಗ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಮತ್ತು ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರಮಠ ಹೇಳಿದರು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 18, 19 ಮತ್ತು 20ರಂದು ಮೂರು ದಿನ ಸಂಸ್ಥೆಯ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

1946 ರಲ್ಲಿ ಮಹಿಳೆಯರು ಸೇರಿಕೊಂಡು ಸಂಸ್ಥೆಯನ್ನು ರಚಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1946 ರಲ್ಲಿ ಪುರಾಣ, ಪ್ರವಚನ, ಧಾರ್ವಿುಕ ಕಾರ್ಯಕ್ರಮದೊಂದಿಗೆ ಜನ್ಮತಳೆದ ಈ ಸಂಸ್ಥೆ ಇಂದು ಎಲ್​ಕೆಜಿಯಿಂದ ಪದವಿವರೆಗೆ ಶಿಕ್ಷಣ ನೀಡುವಲ್ಲಿ ಹೆಸರಾಗಿದೆ. ಈ ಭಾಗದ ನಡೆದಾಡುವ ದೇವರೆಂದು ಪೂಜಿಸುವ ರಂಭಾಪುರಿ ಲಿಂ. ವೀರಗಂಗಾಧರ ಜಗದ್ಗುರುಗಳು ಸಂಸ್ಥೆಗೆ ತಾಯಿ ಪಾರ್ವತಿ ಮಕ್ಕಳ ಬಳಗವೆಂದು ನಾಮಕರಣ ಮಾಡಿದ್ದರು. ಅವರ ಕೃಪಾಶೀರ್ವಾದದಿಂದ ಪಟ್ಟಣದಲ್ಲಿ ಪ್ರಥಮ ಬಾಲವಾಡಿ ಕೇಂದ್ರ, ಮಹಿಳೆಯರಿಗಾಗಿ ಹೊಲಿಗೆ ತರಬೇತಿಯಿಂದ ಪ್ರಾರಂಭವಾಗಿ ಮಕ್ಕಳಿಗೆ ಶಿಕ್ಷಣದ ಜತೆಗೆ ಧರ್ಮ, ಸಂಸ್ಕೃತಿ, ಸಂಪ್ರದಾಯ, ಮಾನವೀಯ ಮೌಲ್ಯಗಳೊಂದಿಗೆ ಬದುಕಿನ ಶಿಕ್ಷಣ ನೀಡಲಾಗುತ್ತದೆ.

1966 ರಲ್ಲಿ ಸಂಸ್ಕೃತ ಪಾಠಶಾಲೆ, 1984ರಲ್ಲಿ ಕನ್ನಡ ಪ್ರಾಥಮಿಕ ಶಾಲೆ, 1985ರಲ್ಲಿ ಬಾಲಕಿಯರ ಪ್ರೌಢಶಾಲೆ, 2005 ರಲ್ಲಿ ಆಂಗ್ಲ ಮಾಧ್ಯಮ ಶಾಲೆ, 2014ರಲ್ಲಿ ಮಹಿಳಾ ಪದವಿ ಮಹಾವಿದ್ಯಾಲಯ ಅನೇಕ ವಿಭಾಗಗಳನ್ನು ಪ್ರಾರಂಭಿಸಿ ಯಶಸ್ವಿ ಪಥದಲ್ಲಿ ಸಾಗುತ್ತಿದೆ. ಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ನೂರಕ್ಕೂ ಹೆಚ್ಚು ಶಿಕ್ಷಕ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಅಮೃತ ಮಹೋತ್ಸವ ಕಾರ್ಯಕ್ರಮವು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ್ಮೕ ಹೆಬ್ಬಾಳ್ಕರ್, ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ.ಚಂದ್ರು ಲಮಾಣಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಸ್ಥೆಯ ಸಾಧಕರು ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ, ರೋಹಿಣಿಬಾಯಿ ಬಹದ್ದೂರದೇಸಾಯಿ, ಶಾರದಾ ಮಹಾಂತಶೆಟ್ಟರ, ಸಂತೋಷ ಬಹದ್ದೂರದೇಸಾಯಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್.ಗ ಡ್ಡದೇವರಮಠ, ದೇವಣ್ಣ ಬಳಿಗಾರ, ಬಸವೇಶ ಮಹಾಂತಶೆಟ್ಟರ, ಅಶ್ವಿನಿ ಅಂಕಲಕೋಟಿ, ಎಂ. ಸಿದ್ದಲಿಂಗಯ್ಯ, ಪ್ರವೀಣ ಬಾಳಿಕಾಯಿ, ರೂಪಾ ನವಲೆ, ನಂದಾ ಧರ್ವಯತ, ಚಂಬಣ್ಣ ಬಾಳಿಕಾಯಿ, ರಮೇಶ ನವಲೆ, ಜೆ.ಡಿ. ಲಮಾಣಿ, ಕಿರಣ ನವಲೆ, ಎಸ್.ಎನ್. ಮಳಲಿ, ಪ್ರಭುಗೌಡ ಎಕ್ಕಿಕೊಪ್ಪ, ಇಂದುಮತಿ ಜಕ್ಕನಗೌಡ್ರ, ಸ್ವಾತಿ ಪೈ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net