ಅಮೃತರು ಸಾಹಿತ್ಯ ಲೋಕದ ಮಹಾಸಾಧಕರು, ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿಕೆ

mng-15jan-amruta
ಕಲ್ಕೂರ ಪ್ರತಿಷ್ಠಾನ ವತಿಯಿಂದ ಅಮೃತರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ನಂದಳಿಕೆ ಬಾಲಚಂದ್ರ ರಾವ್, ಚಂದ್ರಶೇಖರ ಮಯ್ಯ, ವೀಣಾ ಐತಾಳ್, ಅರುಣಾ ನಾಗರಾಜ್ ಇದ್ದರು.
Published on

ಮಂಗಳೂರು: ದಿವಂಗತ ಡಾ.ಅಮೃತ ಸೊಮೇಶ್ವರವರು ತನ್ನ ವೈಚಾರಿಕ ಬರಹಗಳ ಮೂಲಕ ಮಹತ್ಸಾಧನೆ ಮಾಡಿದವರು. ಕವನ, ವಿಮರ್ಶಾ ಗ್ರಂಥ, ಯಕ್ಷಗಾನ ಪ್ರಸಂಗ ರಚನೆ, ತುಳು ಸಿನಿಮಾಗಳ ಹಾಡು ಸಹಿತ ಬಹುವಿಧಗಳಲ್ಲಿ ಕನ್ನಡ ಹಾಗೂ ತುಳು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ಬಲುದೊಡ್ಡ ನಷ್ಟ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಕಲ್ಕೂರ ಪ್ರತಿಷ್ಠಾನ ವತಿಯಿಂದ ಅಮೃತರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ನಂದಳಿಕೆ ಬಾಲಚಂದ್ರ ರಾವ್, ಚಂದ್ರಶೇಖರ ಮಯ್ಯ, ವೀಣಾ ಐತಾಳ್, ಅರುಣಾ ನಾಗರಾಜ್, ಜನಾರ್ದನ ಹಂದೆ, ಪಿ.ಜಯಾನಂದ ರಾವ್, ಮಧುಸೂದನ ಅಲೆವೂರಾಯ, ಡಿ.ಐ.ಅಬೂಬಕರ್ ಕೈರಂಗಳ, ನಿತ್ಯಾನಂದ ಕಾರಂತ ಪೊಳಲಿ, ಎನ್.ಎ.ಪ್ರಭಾಕರ ಶರ್ಮ, ವಿಜಯಲಕ್ಷ್ಮಿಬಿ.ಶೆಟ್ಟಿ, ಜಿ.ಕೆ.ಭಟ್ ಸೇರಾಜೆ, ಸುಧಾಕರ ರಾವ್ ಪೇಜಾವರ, ಕುಶಾಲಪ್ಪ ಗೌಡ, ಮಂಜುಳಾ ಶೆಟ್ಟಿ, ಜಯಪಾಲ ಶೆಟ್ಟಿ ಐಕಳಬಾವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net