ಅಮೃತ ಭೋಜನ ಮಾದರಿ ಕಾರ್ಯ

16 NRL 1
Published on

ನರೇಗಲ್ಲ: ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸವಲತ್ತುಗಳಿದ್ದು, ಅವುಗಳನ್ನು ಅರಿತು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಮೃತ್ಯುಂಜಯ ಧಡೇಸೂರಮಠ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣಮಾಸ ನಿಮಿತ್ತ ಜರುಗಿದ ಅಮೃತ ಭೋಜನ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಕಳಕೊಣ್ಣವರ, ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೋಟಗಿ ಮಾತನಾಡಿದರು.

ಅಶೋಕ ಧರ್ಮಾಯತ್, ಗೀತಾ ಮುಗಳಿ, ರೇಣುಕಾ ಜೋಗಿ, ಈರಮ್ಮ ಈಟಿ, ನಿವೃತ್ತ ಮುಖ್ಯ ಶಿಕ್ಷಕಿ ಆಶಾಬಿ ರಾಂಪೂರ, ಅತಿಥಿ ಶಿಕ್ಷಕಿ ರಾಜೇಶ್ವರಿ ತೊಂಡಿಹಾಳ, ಶಿಕ್ಷಕ ಎಂ.ಪಿ. ಅಣಗೌಡ್ರ, ಲಕ್ಷ್ಮಣ ಪಾಚಂಗಿ, ಚರಣ್ ನಾಯಕ, ಭಾರ್ಗವ ಹಿರೇಮಠ, ಉಮೇಶ ಪತ್ರಿಮಠ, ಮಂಜುನಾಥ ತಳವಾರ, ಸುನೀಲ ಬಡಿಗೇರ, ಇತರರಿದ್ದರು. ಶಿಕ್ಷಕ ಎಸ್.ಎಚ್. ಹಾದಿಮನಿ ನಿರೂಪಿಸಿ, ಮುಖ್ಯ ಶಿಕ್ಷಕ ಬಿ. ಬಿ. ಕುರಿ ಸ್ವಾಗತಿಸಿ, ಶಿಕ್ಷಕ ಜೆ. ಎ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net