ಅಮೃತ ಭಾರತಿ ವಸತಿ ನಿಲಯದ ಪಾಲಕರ ಸಭೆ

hbr (8)
Published on

ಹೆಬ್ರಿ: ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಸತಿ ನಿಲಯದ ವಿದ್ಯಾರ್ಥಿಗಳ ಪಾಲಕರ ಸಭೆ ಭಾನುವಾರ ನಡೆಯಿತು.

ಅಮೃತಭಾರತಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ಮಾತನಾಡಿ, ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಓದುವ ಅವಕಾಶವಿದೆ. ಸಮಯ ಸದ್ಬಳಕೆ ಮಾಡಿಕೊಂಡು ತಂದೆ- ತಾಯಿ, ಸಂಸ್ಥೆಯನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಬೇಕು. ಸಮಾಜದ ಮಾದರಿ ವ್ಯಕ್ತಿಯಾಗಿ ರಾಷ್ಟ್ರ ಸೇವೆಗೆ ಅಣಿಯಾಗಬೇಕೆಂದು ಆಶಿಸಿದರು.

ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ವಸತಿ ನಿಲಯದ ಮುಖ್ಯಸ್ಥ ನಿತಿನ್ ಶೆಟ್ಟಿ, ಮೇಲ್ವಿಚಾರಕರಾದ ವಿರೂಪಾಕ್ಷ, ಅಂಜಲಿ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿ ನವ್ಯಾ ಪೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net