ಮಣ್ಣು ಕೊಚ್ಚಿ ಹೋಗಿ ಕಂದಕ ನಿರ್ಮಾಣ : ರೋಡ್ ಕಟ್ಟಿಂಗ್‌ನಿಂದ ವಾಹನ ಸಂಚಾರಕರಿಗೆ ತೊಂದರೆ

New Project (36)
Published on

ಕಿನ್ನಿಗೋಳಿ: ಕಿನ್ನಿಗೋಳಿ ಸುತ್ತಮುತ್ತ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಎಲ್ಲ ಗ್ರಾಮಗಳಲ್ಲಿ ಅಮೃತ್ 2.0 ನೀರಿನ ಯೋಜನೆ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ಪೈಪ್ ಹಾಕಲು ರೋಡ್ ಕಟ್ಟಿಂಗ್ ಮಾಡಿದ್ದು, ಪೈಪ್ ಅಳವಡಿಸಿದ ನಂತರ ಅದನ್ನು ಸರಿಯಾಗಿ ಮುಚ್ಚದೆ ಮಣ್ಣು ಹಾಕಲಾಗಿದೆ. ಮಳೆ ನೀರಿಗೆ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ರೋಡ್ ಕಟ್ಟಿಂಗ್ ಜಾಗದಲ್ಲಿ ಕಂದಕ ನಿರ್ಮಾಣವಾಗಿದೆ. ಕಿನ್ನಿಗೋಳಿ ಸಮೀಪದ ಉಲ್ಲಂಜೆಯಲ್ಲಿ ರೋಡ್ ಕಟ್ಟಿಂಗ್ ಕಾರಣದಿಂದ ಎರಡು ದಿನಗಳಲ್ಲಿ ಮೂರು ಅಪಘಾತ ನಡೆದಿದ್ದು ಗಾಯಾಳುಗಳು ಅಸ್ಪತ್ರೆಗೆ ದಾಖಲಾಗಿದ್ದಾರೆ. ಉಲ್ಲಂಜೆ ರಸ್ತೆ ಇಳಿಜಾರಲ್ಲಿ ತೋಡು ನಿರ್ಮಾಣವಾದ ಕಾರಣ ವಾಹನಗಳು ನಿಯಂತ್ರಣಕ್ಕೆ ಸಿಗದೆ ಗುಂಡಿಗೆ ಬಿದ್ದು ಅಪಘಾತ ಸಂಭವಿಸುತ್ತಿದೆ. ಗುತ್ತಿಗೆದಾರರು ಶೀಘ್ರ ಸರಿಪಡಿಸದಿದ್ದಲ್ಲಿ ಗ್ರಾಮಸ್ಥರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net