

ಕಂಪ್ಲಿ: ಪವಾಡಪುರುಷ ಹೇರೂರು ವಿರುಪನಗೌಡ ತಾತನ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಹೆಬ್ಬಾಳ ಬೃಹನ್ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿ, ಹೇರೂರು ವಿರುಪಣ್ಣ ತಾತನವರು ಅಧ್ಯಾತ್ಮ ಸಾಧಕರಾಗಿದ್ದು ಅವರ ತತ್ವಪದ, ಬುಡಬುಡಿಕೆ ಪದಗಳು ಅಧ್ಯಾತ್ಮ ಹಿನ್ನೆಲೆ ಜತೆಗೆ ಸುಲಭವಾಗಿ ಮೋಕ್ಷ ಸಾಧನೆಯನ್ನು ವಿವರಿಸುತ್ತವೆ. ತಾತನವರ ತತ್ವಪದ ಸಾಹಿತ್ಯ ಜನರ ಬಾಯಲ್ಲಿ ಹಾಸು ಹೊಕ್ಕಾಗಿದೆ ಎಂದರು.
ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಂತರ ಮಡಿತೇರು ಎಳೆಯಲಾಯಿತು. ಉಯ್ಯಲೆ ಸೇವೆ, ಅನ್ನಸಂತರ್ಪಣೆ, ಶ್ರೀ ವಿರುಪನಗೌಡ ತಾತನವರ ಭಜನಾ ಮಂಡಳಿ ಸೇರಿ ವಿವಿಧ ಮಂಡಳಿಗಳಿಂದ ಅಖಂಡ ಭಜನೆ ಜರುಗಿತು. ರಥೋತ್ಸವವು ದೇವಸ್ಥಾನದಿಂದ ಪಾದಗಟ್ಟೆತನಕ ಸಾಗಿ ಮೂಲಸ್ಥಾನಕ್ಕೆ ಮರಳಿತು.
ಸೇವಾಸಂಘದ ಅಧ್ಯಕ್ಷ ಡಿ.ವಿ.ರಮೇಶ ಗುಪ್ತಾ, ಪದಾಧಿಕಾರಿಗಳಾದ ಬಿ.ವೆಂಕೋಬಣ್ಣ, ಆದೋನಿ ರಂಗಪ್ಪ, ಉಬಾಳೆ ನಾಗರಾಜ, ಅಂಚೆ ಮಾಬುಸಾಬ್, ಸಿ.ಎಂ.ವೀರಯ್ಯಸ್ವಾಮಿ, ಚಾಗಿ ಮಂಜುನಾಥ, ಉಡೇಗೋಳ ವೆಂಕಟೇಶ, ವಿ.ನೀಲಕಂಠಪ್ಪ, ಎಸ್.ವೆಂಕಟೇಶ, ಚಿತ್ರಗಾರ ರವಿ, ಉಡೇಗೋಳ ವಿರುಪಣ್ಣ, ಟಿ.ಗಂಗಣ್ಣ, ಜಿ.ಶಿವಪ್ಪ, ಎನ್.ವೀರೇಶ್, ಎಂ.ಹುಲುಗಪ್ಪ, ಭಕ್ತರಾದ ಬುರೆಡ್ಡಿ ವಿರುಪಾಕ್ಷಿ, ಡಾ.ಎ.ಸಿ.ದಾನಪ್ಪ ಸೇರಿ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.