ಪ್ಲೇಸ್ಮೆಂಟ್ ಸೆಲ್‌ನಲ್ಲಿ ವಿಫುಲ ಅವಕಾಶ

Ample opportunity in placement cell
ತೇರದಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ಟಿವಿಎಸ್ ಟ್ರೈನಿಂಗ್ ಸರ್ವಿಸ್ ಸಹಯೋಗದೊಂದಿಗೆ ಉದ್ಯೋಗ ಮೇಳ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಡಾ. ದಯಾನಂದ ಬೆಳ್ಳಗಿ, ಐಸಿಐಸಿ ಬ್ಯಾಂಕ್‌ನ ಗೋಪಾಲ್ ಜಿ. ಮತ್ತಿತರರಿದ್ದರು.
Published on

ತೇರದಾಳ: ಪ್ಲೇಸ್ಮೆಂಟ್ ಸೆಲ್ ಅಡಿಯಲ್ಲಿ ಇಂದಿನ ಯುವಕರಿಗೆ ವಿಫುಲ ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಂಶುಪಾಲ ಡಾ. ದಯಾನಂದ ಬೆಳ್ಳಗಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸೆಲ್ ಮತ್ತು ಐಕ್ಯೂ ಎಸಿ ಘಟಕದ ಅಡಿಯಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ಟಿವಿಎಸ್ ಟ್ರೈನಿಂಗ್ ಸರ್ವಿಸ್ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡ ಐಸಿಐಸಿಐ ಬ್ಯಾಂಕ್‌ನ ಸೀನಿಯರ್ ಎಚ್.ಆರ್ ಎಕ್ಸಿಕ್ಯೂಟಿವ್ ಗೋಪಾಲ್ ಜಿ., ಧಾರವಾಡ ಪ್ಲೇಸ್ಮೆಂಟ್ ಸಂಯೋಜಕ ಬಿ.ಆರ್. ಶೆಟ್ಟಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾಹಿತಿ ನೀಡಿದರು.

ಉದ್ಯೋಗ ಮೇಳದಲ್ಲಿ ಪದವಿ ಪಡೆದ ಅಂದಾಜು 9 ಅಭ್ಯರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ಅಪ್ಪನ್ನ ಪೂಜಾರಿ, ಘಟಕ ಮುಖ್ಯಸ್ಥೆ ಶೈಲಾ ಸೂಳೆಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೊ. ಎಸ್.ಎಸ್. ಸಜ್ಜನ ನಿರೂಪಿಸಿದರು. ಉಮೇಶ ಕಾಂಬಳೆ ಸ್ವಾಗತಿಸಿದರು. ಪ್ರೊ. ವಡ್ರಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net