ಶುಶ್ರೂಷಕರಿಗೆ ವಿಪುಲ ಅವಕಾಶ

mysore
Published on

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರಿಗೆ ವಿಪುಲ ಉದ್ಯೋಗಾವಕಾಶಗಳಿವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.


ಕಾವೇರಿ ಸಮೂಹ ಸಂಸ್ಥೆಯಲ್ಲಿ ಕಾವೇರಿ ನರ್ಸಿಂಗ್ ಕಾಲೇಜು, ಸಂತ್ ಅಲ್ಫೋನ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಸಮರ್ಪಣಾ ಹಾಗೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.


ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದೆ. ನುರಿತ ಶುಶ್ರೂಷಕರ ಬೇಡಿಕೆ ಇದೆ. ಆದರೆ, ಜಾಗತಿಕ, ಸ್ಥಳೀಯ ಮಟ್ಟದಲ್ಲೂ ಶುಶ್ರೂಷಕರ ಕೊರತೆ ಇದೆ. ನರ್ಸಿಂಗ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶಗಳಿವೆ ಎಂದರು.


ಶುಶ್ರೂಷಕರಾದವರು ರೋಗಿಗಳ ಸೇವೆಯಲ್ಲಿ ಸಮರ್ಪಿಸಿಕೊಳ್ಳಬೇಕು. ಅದರಿಂದ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪಬಹುದಾಗಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಮಾಜದಲ್ಲಿ ವಿಶೇಷ ಗೌರವ ಇದೆ. ಇದು ಬೇರೆ ವೃತ್ತಿಯವರಿಗೆ ಇಲ್ಲ. ರೋಗಿಗಳಿಗೆ ಆರೈಕೆ ಮಾಡುವುದರೊಂದಿಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾಯಕವನ್ನೂ ಶುಶ್ರೂಷಕರ ಮಾಡಬೇಕು ಎಂದರು.


ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಚಲುವಾಂಬ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಅಧೀಕ್ಷಿ ಸುಲಲಿತಾಂಗಿ, ಕಾವೇರಿ ಸಮೂಹ ಸಂಸ್ಥೆಯ ಛೇರ‌್ಮನ್ ಡಾ.ಜಿ.ಆರ್.ಚಂದ್ರಶೇಖರ್, ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಡೀನ್ ಪ್ರೊ.ಶ್ರೀಕಂಠಸ್ವಾಮಿ, ಪ್ರಾಂಶುಪಾಲ ಡಾ.ಎನ್.ರಾಜ್‌ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net